ಕಲ್ಲಂಗಡಿ ಹಣ‍್ಣು ತಿಂದ ಬಳಿಕ ನೀರು ಕುಡಿಯಬಹುದೇ?

ಶನಿವಾರ, 17 ಏಪ್ರಿಲ್ 2021 (06:58 IST)
ಬೆಂಗಳೂರು : ಬೇಸಿಗೆಯಲ್ಲಿ ಸಿಗುವಂತಹ ಹಣ‍್ಣುಗಳಲ್ಲಿಕಲ್ಲಂಗಡಿ ಹಣ‍್ಣು ಕೂಡ ಒಂದು. ಇದನ್ನು ಬೇಸಿಗೆಕಾಲದಲ್ಲಿ ಸೇವಿಸಿದರೆ ದೇಹದಲ್ಲಿ ಉಂಟಾದ ನೀರಿನ ಕೊರತೆಯನ್ನು ನಿವಾರಿಸುತ್ತದೆ. ಆದರೆ ಈ ಹಣ‍್ಣನ್ನು ಸೇವಿಸಿದ ಬಳಿಕ ನೀರನ್ನು ಕುಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಕಲ್ಲಂಗಡಿ ಹಣ‍್ಣು ಸೇವಿಸಿದ ಬಳಿಕ ನೀರನ್ನು ಕುಡಿದರೆ ಜೀರ್ಣಕ್ರಿಯೆ ಹಾಳಾಗುತ್ತದೆ. ದೇಹಕ್ಕೆ ನೀರಿನಾಂಶ ಹೆಚ್ಚಾದರೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ನೀರಿನಾಂಶವಿದೆ. ಅದರ ಜೊತೆಗೆ ಮತ್ತೆ ನೀರನ್ನು ಕುಡಿದರೆ ಇದು ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ.

ತಜ್ಞರ ಪ್ರಕಾರ ಯಾವುದೇ ಹಣ‍್ಣುಗಳನ್ನು ಸೇವಿಸಿದರೂ ಕೂಡ ನೀರನ್ನು ಕುಡಿಯಬಾರದು. ಯಾಕೆಂದರೆ ‍ಹಣ‍್ಣುಗಳಲ್ಲಿ ಸಕ್ಕರೆ , ಫೈಬರ್ ಅಂಶ ಅಧಿಕವಾಗಿರುತ್ತದೆ. ಇದರಿಂದ ನಮ್ಮ ಹೊಟ್ಟೆಯಲ್ಲಿರುವ ಸೂಕ್ಷ್ಮಜೀವಿಗಳು ಕರುಳುಗಳಿಗೆ ಪ್ರವೇಶಿಸಿ ಪರಿಣಾಮ ಬೀರುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ