ಬೇಸಿಗೆಯಲ್ಲಿ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿದರೆ ಏನಾಗುತ್ತದೆ ಗೊತ್ತಾ?
ಶನಿವಾರ, 17 ಏಪ್ರಿಲ್ 2021 (06:56 IST)
ಬೆಂಗಳೂರು : ಬೇಸಿಗೆಯಲ್ಲಿ ಚರ್ಮ ವಾತಾವರಣದ ಶಾಖಕ್ಕೆ ಉರಿಯುತ್ತಿರುತ್ತದೆ. ಇದರಿಂದ ಮುಖದಲ್ಲಿ ಡಲ್ ನೆಸ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಬೇಸಿಗೆಯಲ್ಲಿ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿ. ಇದರಿಂದ ಹಲವಾರು ಪ್ರಯೋಜನವನ್ನು ಪಡೆಯಬಹುದು.
*ಅಲೋವೆರಾ ಚರ್ಮದ ದದ್ದು , ತುರಿಕೆ ಮತ್ತು ಸುಡುವಿಕೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ರಾತ್ರಿ ಅಲೋವೆರಾ ಹಚ್ಚಿ ಬೆಳಿಗ್ಗೆ ವಾಶ್ ಮಾಡಿ.
*ಅಲೋವೆರಾ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಮತ್ತು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
*ಸೂಕ್ಷ್ಮ ಚರ್ಮದಲ್ಲಿ ಬಹಳ ಬೇಗ ಗುಳ್ಳೆಗಳು ಮೂಡುತ್ತವೆ. ಇದನ್ನು ಅಲೋವೆರಾ ಜೆಲ್ ಬಳಸಿ ಹೋಗಲಾಡಿಸಬಹುದು.
* ಇದು ಮುಖದಲ್ಲಿರುವ ಕಂದು ಬಣ‍್ಣವನ್ನು ತೆಗೆದುಹಾಕಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.