ಬೆಂಗಳೂರು : ತೆಂಗಿನಎಣ್ಣೆ ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದರಲ್ಲಿ ಚರ್ಮವನ್ನು ತೇವಾಂಶಗೊಳಿಸುವ ಮತ್ತು ಗುಳ್ಳೆಗಳನ್ನು ನಿವಾರಿಸುವ ಶಕ್ತಿ ಇರುತ್ತದೆ. ಹಾಗಾಗಿ ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.
1 ಚಮಚ ತೆಂಗಿನೆಣ್ಣೆ, 1 ಚಮಚ ಅಲೋವೆರಾ ಜೆಲ್ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮುಖಕ್ಕೆ ಲಘುವಾಗಿ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
4 ಚಮಚ ತೆಂಗಿನೆಣ್ಣೆ, 1 ಚಮಚ ಜೇನುತುಪ್ಪ, 4 ಕಪ್ ಬೆಣ್ಣೆ ಇವಿಷ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡಿ.