ಮಲಬದ್ಧತೆಯನ್ನು ನಿವಾರಿಸಲು ಈ ಹಣ್ಣುಗಳನ್ನು ಸೇವಿಸಿ

ಭಾನುವಾರ, 25 ಆಗಸ್ಟ್ 2019 (09:08 IST)
ಬೆಂಗಳೂರು : ಕರುಳಿನ ಅನಿಯಮಿತವಾದ ಚಲನೆಯಿಂದ ಉಂಟಾಗುವ ಸಮಸ್ಯೆ ಎಂದರೆ ಮಲಬದ್ಧತೆ ಎನ್ನಬಹುದು. ಸಾಮಾನ್ಯವಾಗಿ 30 ವರ್ಷ ವಯೋಮಿತಿಯ ನಂತರ ಬಹುತೇಕ ಜನರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುತ್ತಾರೆ.ಕೆಲವು ಹಣ್ಣುಗಳನ್ನು ಸೇವಿಸಿದರೆ ಈ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.
*ಕಿವಿ ಹಣ್ಣು: ಕಿವಿ ಹಣ್ಣುನ್ನು  ನಾಲ್ಕು ವಾರಗಳ ಗಣನೀಯವಾಗಿ ಸೇವಿಸುತ್ತಾ ಬಂದರೆ ಕರುಳಿನ ಚಲನೆಯು ಉತ್ತಮಗೊಳ್ಳುವುದು ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ. ಇದು ಮಲವನ್ನು ಮೃದುಗೊಳಿಸುವುದು.

 
*ಸೇಬು : ಉತ್ತಮ ನಾರಿನಾಂಶ ಹೊಂದಿರುವ ಸೇಬು ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ಮಲಬದ್ದತೆಯನ್ನು ನಿವಾರಿಸಬಹುದು.


*ಪಿಯರ್ : ಇವುಗಳಲ್ಲಿ ನಾರಿನಾಂಶಗಳು ಸಮೃದ್ಧವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ರಕ್ಟೋಸ್ ಮತ್ತು ಸೋರ್ಬಿಟೋಲ್ ಹೊಂದಿದ್ದು, ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.


*ಕಿತ್ತಳೆಯಲ್ಲಿ ಮಿಟಮಿನ್ ಸಿ ಮತ್ತು ನಾರಿನಾಂಶ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ.


ಅಂಜೂರ : ಇದು ಕರಳಿನ ಚಲನೆಯನ್ನು ಉತ್ತೇಜಿಸುತ್ತದೆ.  ಅವುಗಳಲ್ಲಿರುವ ಹೆಚ್ಚಿನ ನಾರಿನಾಂಶ ದಿಂದ  ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ