ಉಗುರುಗಳು ಉದ್ದವಾಗಿ ಬೆಳೆಯಲು ಇದನ್ನು ಸೇವಿಸಿ

ಭಾನುವಾರ, 25 ಆಗಸ್ಟ್ 2019 (08:58 IST)
ಬೆಂಗಳೂರು : ಉಗುರುಗಳು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಉಗುರುಗಳು ಸರಿಯಾಗಿ ಬೆಳೆಯುವುದಿಲ್ಲ. ಅಂತವರಿಗೆ ಉಗುರುಗಳು ಅಂದವಾಗಿ, ಉದ್ದವಾಗಿ ಬೆಳೆಯಬೇಕೆಂದರೆ ಇದನ್ನು ಸೇವಿಸಿ.



 
ಸಾಲ್ಮನ್ : ಇದರಲ್ಲಿ ವಿಟಮಿನ್ ಡಿ, ಪ್ರೋಟಿನ್ ಗಳು ಅಧಿಕವಾಗಿರುತ್ತದೆ. ಈ ಪ್ರೋಟಿನ್ ಗಳು ಕೊಲಾಜನ್ ಉತ್ಪತ್ತಿ ಮಾಡುತ್ತದೆ. ಇದು ಉಗುರು ಹಾಗೂ ಕೂದಲು ಬೆಳವಣೆಗೆಗೆ ಸಹಕಾರಿ.

 

*ಕೋಳಿ ಮೊಟ್ಟೆ : ಮೊಟ್ಟೆಗಳಲ್ಲಿ ಬಯೋಟಿನ್ ಅಧಿಕವಾಗಿರುತ್ತದೆ. ಇದು ಕೂದಲು, ಉಗುರುಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.

 

*ಬ್ರೋಕಲೀ : ಇದು ಆರೋಗ್ಯವನ್ನು ವೃದ್ಧಿಸುತ್ತದೆ. ಇದನ್ಉ ಸೇವಿಸುವುದರಿಂದ ಉಗುರುಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ.

 

*ಕೊಬ್ಬರಿ ಎಣ್ಣೆ : ಈ ಎಣ್ಣೆ ಸೇವನೆಯಿಂದ  ವಿಟಮಿನ್ ಕೆ,ಎಗಳನ್ನು ಹೀರಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ಇದು ಉಗುರುಗಳ ಬೆಳವಣಿಗೆಗೆ ಸಹಕಾರಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ