ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ ಜ್ಯೂಸ್ ಗಳನ್ನು ಸೇವಿಸಿ

ಶುಕ್ರವಾರ, 22 ಮಾರ್ಚ್ 2019 (08:51 IST)
ಬೆಂಗಳೂರು : ಜ್ವರ ಬಂದಾಗ ಸುಸ್ತು ಆಯಾಸವಾಗುವುದು ಸಹಜ. ಈ ಸಮಯದಲ್ಲಿ ರೋಗನಿರೋಧಕ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ.  ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ ಜ್ಯೂಸ್ ಗಳನ್ನು ಸೇವಿಸಿ.


*ಕಿತ್ತಳೆ ಅಥವಾ ಮೂಸಂಬಿಯಲ್ಲಿ ವಿಟಮಿನ್‌ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದೆ.


*1 ಬೀಟ್‌ ರೂಟ್‌, 3 ಕ್ಯಾರೆಟ್‌, ಒಂದು ಕಿತ್ತಳೆ, 2 ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ , ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ರುಬ್ಬಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು


* ಸ್ಟ್ರಾಬೆರಿ ಮತ್ತು ಕಿವಿಫ್ರೂಟ್‌ ಜತೆ ಎರಡು ಪುದೀನಾ ಎಲೆ ಹಾಕಿ ಜ್ಯೂಸ್‌ ಮಾಡಿ ಕುಡಿದರೆ


ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿಫ್ರೂಟ್‌ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.

* ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಜ್ಯೂಸ್ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುತ್ತದೆ

**ಸೇಬು, ಕ್ಯಾರೆಟ್ ಮತ್ತು ಆರೇಂಜ್  ಈ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಕುಡಿದರೆ ಸುಸ್ತು ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ