ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ನಮ್ಮ ದಿನನಿತ್ಯದ ಆಹಾರಗಳು

ಬುಧವಾರ, 13 ಫೆಬ್ರವರಿ 2019 (15:22 IST)
ಮನುಷ್ಯನ ಉತ್ತಮ ಆರೋಗ್ಯವನ್ನು ರೂಪಿಸಲು ರೋಗನಿರೋಧಕ ಶಕ್ತಿ ತುಂಬಾ ಸಹಾಯಕಾರಿಯಾಗಿದೆ. ಈ ಆಹಾರ ಸೇವನೆಯಿಂದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬುಹುದು. ನಮ್ಮ ದೇಹಕ್ಕೆ ಸರಿಯಾದ ಸಮಯಕ್ಕೆ ಹಾಗೂ ನಿಯಮಿತವಾಗಿ ಆಹಾರ-ಪದಾರ್ಥಗಳನ್ನು ಸೇವಿಸಿದರೆ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗದಂತೆ ದೇಹವನ್ನು ಆರೋಗ್ಯಕರವಾಗಿರುವಂತೆ ದೀರ್ಘಕಾಲದವರೆಗೂ ನೋಡಿಕೊಳ್ಳಬಹುದು. ಹಾಗಾದರೆ ಅವು ಯಾವೆಂಬುದನ್ನು ನೋಡೋಣ..
ಕಿತ್ತಳೆಹಣ್ಣು
ಕಿತ್ತಳೆಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಿಳಿ ರಕ್ತಕಣಗಳಿವೆ.
 
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ, ಸಿ ಸೇರಿದಂತೆ ಹಲವು ಪೌಷ್ಠಿಕಾಂಶಗಳಿದ್ದು, ಅಸಿಡಿಟಿ ಗ್ಯಾಸ್ಟಿಕ್ ತೊಂದರೆಗಳಿಗೆ ಬಹಳ ಉತ್ತಮ ಔಷಧಿಯಾಗಿದೆ.
 
ಬಸಳೆ ಸೊಪ್ಪು
ಬಸಳೆ ಸೊಪ್ಪನ್ನು ಪೌಷ್ಠಿಕಾಂಶದ ಸೊಪ್ಪು ಎಂತಲೂ ಕರೆಯಲಾಗುತ್ತದೆ. ಪ್ರತೀ ನಿತ್ಯ ಈ ಸೊಪ್ಪನ್ನು ತಿನ್ನುತ್ತಾ ಬಂದರೆ ದೇಹದ ಆರೋಗ್ಯ ಹೆಚ್ಚಾಗುತ್ತದೆ.
 
ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ಕೆರೊಟಿನಾಯ್ಡ್‌ಗಳು ಹೆಚ್ಚಾಗಿದೆ. ವಿಟಮಿನ್ ಎ ಅಧಿಕ ಪ್ರಮಾಣದಲ್ಲಿದ್ದು ದೇಹಕ್ಕೆ ಪೋಷಕಾಂಶ ಹಾಗೂ ನಾರಿನಂಶ ಒದಗಿಸಿ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
 
ಅಣಬೆ
ಅಣಬೆ ಅತೀ ಹೆಚ್ಚು ಪ್ರೋಟೀನ್ ಯುಕ್ತ ಆಹಾರವಾಗಿದ್ದು, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್ ಮತ್ತು ಆಂಟಿಆಕ್ಸಿಡಾಂಟ್ಸ್ ಅಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ.
 
ಕೋಸುಗಡ್ಡೆ
ಹೆಚ್ಚಾಗಿ ಕೋಸುಗಡ್ಡೆ ತಿನ್ನಬೇಕು, ಕೋಸುಗಡ್ಡೆಯಿಂದ ಪದಾರ್ಥಗಳನ್ನು ಮಾಡಬಹುದು, ಸೂಪ್ ಮಾಡಿ ಕುಡಿಯಬಹುದು, ಕೋಸುಗಡ್ಡೆ ಸಲಾಡ್ ಕೂಡ ತಯಾರಿಸಬಹುದು. ಈ ಆಹಾರಗಳನ್ನು ತಿನ್ನುತ್ತಾ ಬಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.
 
ಕಿವಿಹಣ್ಣು
ಕಿವಿಹಣ್ಣಿನಲ್ಲಿ ಪೋಷಕಾಂಶಗಳು ಅತೀ ಹೆಚ್ಚಿದ್ದು ಪ್ರತಿದಿನ ಈ ಹಣ್ಣನ್ನು ಸೇವಿಸಿದರೆ ಆರೋಗ್ಯ ಬಹಳ ಒಳ್ಳೆಯದು.
 
ಜವೆಗೋಧಿ
ಜವೆಗೋಧಿಯಲ್ಲಿ ಅಣಬೆಯಲ್ಲಿರುವಂತೆ ಅತೀ ಹೆಚ್ಚು ಪೌಷ್ಠಿಕಾಂಶಗಳಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
ಬಾದಾಮಿ
ಬಾದಾಮಿಯಲ್ಲಿ ಶೇಕಡಾ 50% ರಷ್ಟು ವಿಮಟಮಿನ್ ಇ ಅಂಶವಿದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ, ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
 
ಮೊಸರು
ಮೊಸರಿನಲ್ಲಿ ವಿಟಮಿನ್ ಡಿ ಇದ್ದು ಇದನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಶೀತ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆ ಬರುವುದಕ್ಕೂ ತಡೆಯಬಹುದು. ಶೇಕಡಾ 70 ರಷ್ಟು ರೋಗನಿರೋಧಕ ಅಂಶವು ನಮ್ಮ ಜೀರ್ಣಾಂಗದಲ್ಲಿರುತ್ತದೆ. ಜೀರ್ಣಕ್ರೀಯೆ ಸರಿಯಾಗಿ ನಡೆದರೆ ಮಾತ್ರ ಅದು ದೇಹಕ್ಕೆ ದೊರೆಯುತ್ತದೆ. ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ