ಹಲ್ಲುಗಳ ಜುಂ ಎನ್ನುವಿಕೆಯನ್ನು ತಡೆಯಲು ಈ ಹಣ್ಣನ್ನು ಸೇವಿಸಿ

ಬುಧವಾರ, 27 ಜೂನ್ 2018 (13:11 IST)
ಬೆಂಗಳೂರು : ನಮ್ಮ ಹಲ್ಲುಗಳ ಮೇಲೆ ಎನಾಮಿಲ್ ಎಂಬ ಪದರವಿರುತ್ತದೆ. ‘ಹೈಡ್ರಾಕ್ಸೀಫ್ಲೋರೋ ಎಪಟೈಟ್ ‘ ಎಂಬ ಪದಾರ್ಥದಿಂದ ರೂಪುಗೊಂಡಿರುವ ಹಲ್ಲುಗಳ ಎನಾಮಿಲ್ ಮೂಳೆಗಳಿಗಿಂತಲೂ ಗಟ್ಟಿಯಾಗಿರುತ್ತದೆ. ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಎನಾಮಿಲ್ ಕ್ರಮೇಣ ಸವೆದುಹೋಗುತ್ತದೆ. ಇದರಿಂದ ತಂಪಾದ ಅಥವಾ ಬಿಸಿ ಪದಾರ್ಥಗಳು ಹಲ್ಲುಗಳಿಗೆ ಸೋಕಿದಾಗಲೂ ಜುಂ ಎನ್ನುತ್ತದೆ.


ಹಲ್ಲುಗಳ ಮೇಲಿರುವ ಎನಾಮಿಲ್ ಸಂರಕ್ಷಿಸುವುದರಲ್ಲಿ ಖರ್ಜೂರಗಳು ಉತ್ತಮವಾಗಿ ಕೆಲಸಮಾಡುತ್ತವೆ. ಖರ್ಜೂರಗಳನ್ನು ದಿನಾಲೂ ಸೇವಿಸುವುದರಿಂದ ಅವುಗಳಲ್ಲಿರುವ ‘ಫ್ಲೋರಿನ್’ ದಂತಗಳ ಮೇಲೆ ಪಾಚಿ ಸೇರಿಕೊಳ್ಳದಂತೆ ಮಾಡಿ, ಎನಾಮಿಲ್ ನೊಂದಿಗೆ ಸೇರಿಕೊಂಡು’ ಹೈಡ್ರಾಕ್ಸೀ ಫ್ಲೋರೋ ಎಪಟೈಟ್’ ಆಗಿ ಪರಿವರ್ತನೆಗೊಂಡು ದಂತಗಳನ್ನು ರಕ್ಷಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ