ಬೆಂಗಳೂರು : ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಪದೇ ಪದೇ ಬಾಯಿ ಒಣಗಿದಂತಾಗುತ್ತದೆ. ಈ ಸಮಸ್ಯೆ ತಕ್ಷಣ ವಾಸಿಯಾಗಲು ಈ ಮನೆಮದ್ದನ್ನು ಮಾಡಿ ಕುಡಿಯಿರಿ.
ಸೊಂಪಿನಲ್ಲಿ ಪ್ಲೇವೊನೈಡ್ ಗಳಿದ್ದು, ಇವು ಲಾಲಾರಸ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದಕಾರಣ ಸೊಂಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಬಾಯಿ ಒಣಗುವುದು ಕಡಿಮೆಯಾಗುತ್ತದೆ.