ರಾತ್ರಿ ಕುಡಿದ ಮದ್ಯದ ನಶೆ ಇಳಿದು ಮರುದಿನ ಫ್ರೆಶ್ ಆಗಿರಲು ಇದನ್ನು ಸೇವಿಸಿ
ಬುಧವಾರ, 10 ಜುಲೈ 2019 (09:05 IST)
ಬೆಂಗಳೂರು : ಕೆಲವರು ತುಂಬಾ ಇಷ್ಟಪಟ್ಟು ರಾತ್ರಿ ಮದ್ಯಪಾನ ಮಾಡುತ್ತಾರೆ. ಆದರೆ ಮರುದಿನವಾದರೂ ನಶೆ ಇಳಿಯದೆ ತಲೆಭಾರ ಎನಿಸುತ್ತದೆ. ಈ ತಲೆಭಾರ ಕಡಿಮೆ ಮಾಡಲು ಇಲ್ಲಿದೆ ಪರಿಹಾರ.
ಮೈಸೂರು ನಗರದ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರುವ ಸಿ.ಎಫ್.ಟಿ.ಆರ್.ಐ ಇದೀಗ ‘ಎ- ಹ್ಯಾಂಗೊ’ ಎಂಬ ಹೆಸರಿನ ಔಷಧಿಯನ್ನು ಸಂಶೋಧನೆ ಮಾಡಿದೆ. ಇದನ್ನು ಸೇವಿಸಿದರೆ ಮದ್ಯಪಾನ ಮಾಡಿದ ಮರುದಿನ ನಶೆ ಇಳಿದು ತಲೆಭಾರ ಕಡಿಮೆಯಾಗಿ ನೀವು ಫ್ರೆಶ್ ಆಗಿರಬಹುದು.
ಈ ‘ಎ- ಹ್ಯಾಂಗೊ’ ಸೂಕ್ಷ್ಮ ಜೀವಿಗಳಿಂದ ಪಡೆದ ಒಂದು ವಸ್ತುವಾಗಿದ್ದು, ಇದನ್ನ ಗುಳಿಗೆ ರೂಪದಲ್ಲಾಗಲಿ ಅಥವಾ ಪುಡಿ ರೂಪದಲ್ಲಾಗಲಿ ಸೇವಿಸಬಹುದು. ಜೊತೆಗೆ ಕುರ್ ಕುರೆ ಅಂತಹ ವಸ್ತುಗಳ ಮೇಲೆ ಈ ಪುಡಿಯನ್ನ ಹಾಕಿ ಕೂಡ ಸೇವನೆ ಮಾಡಬಹುದು.