ಅಡುಗೆ ಮನೆಯಲ್ಲಿ ಸಿಗುವ ಈ 3 ವಸ್ತುಗಳನ್ನು ಬಳಸಿ ನಿಮ್ಮ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಿ

ಶನಿವಾರ, 29 ಜೂನ್ 2019 (09:01 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅನೇಕರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರು ಸೇವಿಸುವ ಆಹಾರ ಪದಾರ್ಥಗಳು ಇದಕ್ಕೆ ಮುಖ್ಯ ಕಾರಣವಾಗಿದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಜೀವಕ್ಕೆ ಕುತ್ತು. ಆದ್ದರಿಂದ ಮನೆಯಲ್ಲೇ ಸಿಗುವಂತಹ ವಸ್ತುಗಳಿಂದ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಬಹುದು.



 


* ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೆಳ್ಳುಳ್ಳಿ ಬೆಸ್ಟ್ ಮನೆಮದ್ದು, ಇದು ಕೊಲೆಸ್ಟ್ರಾಲ್ ಆಕ್ಸಿಡೀಕರಣವನ್ನು ತಡೆಯುತ್ತದೆ. ಮತ್ತು ಪ್ಲೇಟ್ ಲೆಟ್ ಗಳ ಒಟ್ಟುಗೂಡಿಸುವಿಕೆಯ ಶಕ್ತಿಯನ್ನು ಕಡಿಮೆ ಮಾಡುವ ಮೂಲಕ ರಕ್ತವನ್ನು ತೆಳುವಾಗಿಸುತ್ತದೆ.


*ಶುಂಠಿ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿ ಮನೆಮದ್ದು.ಇದನ್ನು ಸೇವಿಸಿದರೆ ಹೃದಯದಲ್ಲಿನ ಅಪಧಮನಿಗಳ ಅಡಚಣೆಯನ್ನು ಹಾಗೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದರಿಂದ ರಕ್ತ ಪರೀಚಲನೆ ಸರಾಗವಾಗಿ ನಡೆಯುತ್ತದೆ.


* ಕೊಲೆಸ್ಟ್ರಾಲ್ ಕಡಿಮೆ ಮಾಡಲು ಕ್ಯಾರೆಟ್ ಒಂದು ಶಕ್ತಿಯುತ ತರಕಾರಿ. ಇದು ಫೈಬರ್ ನ್ನು ಹೊಂದಿದ್ದು, ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ