ಕೂದಲು ಉದುರುವಿಕೆ ತಡೆಯಲು ಮೆಂತೆ ಮದ್ದು

ಶುಕ್ರವಾರ, 6 ಅಕ್ಟೋಬರ್ 2017 (08:20 IST)
ಬೆಂಗಳೂರು: ನೀರು ಬದಲಾವಣೆ, ವಾತಾವರಣ, ಒತ್ತಡದ ಜೀವನ ಇತ್ಯಾದಿಗಳಿಂದ ಹಲವರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಮೆಂತೆ ಕಾಳಿನ ಮನೆ ಮದ್ದು ಮಾಡಬಹುದು. ಹೇಗೆಂದು ನೋಡಿಕೊಳ್ಳಿ.

 
ಮೆಂತೆ ಕಾಳು ತಂಪು ಗುಣ ಹೊಂದಿರುವುದರಿಂದ ಉಷ್ಣತೆಯಿಂದಾಗಿ ಕೂದಲು ಉದುರುತ್ತಿದ್ದರೆ ಇದು ರಾಮಬಾಣವಾಗುತ್ತದೆ. ಮೆಂತೆ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ ಸಾಕು.

ಎರಡು ಟೇಬಲ್ ಸ್ಪೂನ್ ಮೆಂತೆ ಕಾಳನ್ನು ನೆನೆಸಿಡಿ. ಅದೇ ನೀರು ಬಳಸಿ ನೆನೆಸಿದ ಕಾಳುಗಳನ್ನು ಮಿಕ್ಸಿಯಲ್ಲಿ ಅರೆದುಕೊಳ್ಳಿ. ಇದು ನುಣ್ಣನೆ ಪೇಸ್ಟ್ ರೀತಿ ಆದರೆ ಸಾಕು. ಇದು ಒಂಥರಾ ಅಂಟಿನಂತಾಗುತ್ತದೆ. ಒಂದು ವೇಳೆ ತಲೆಹೊಟ್ಟಿನ ಸಮಸ್ಯೆಯಿದ್ದರೆ, ಈ ಪೇಸ್ಟ್ ತಯಾರಿಸುವಾಗ ಒಂದು ಸ್ಪೂನ್ ನಿಂಬೆ ರಸವನ್ನೂ ಬಳಸಬಹುದು.

ಈ ಪೇಸ್ಟ್ ನ್ನು ಕೂದಲಿನ ಬೇರುಗಳಿಗೆ ಹಚ್ಚಿಕೊಳ್ಳಿ. ನಂತರ 20 ನಿಮಿಷ ಹಾಗೇ ಬಿಡಿ. ನಂತರ ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ ಕೂದಲು ಉದುರುವಿಕೆ ತಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ