ಎರಡನೇ ಮಗು ಮಾಡಿಕೊಳ್ಳಲು ಪತ್ನಿ ಒಪ್ಪಿಕೊಳ್ಳುತ್ತಿಲ್ಲ!

ಮಂಗಳವಾರ, 17 ಡಿಸೆಂಬರ್ 2019 (09:12 IST)
ಬೆಂಗಳೂರು: ನಮಗೆ ಈಗಾಗಲೇ ನಾಲ್ಕು ವರ್ಷದ ಗಂಡು ಮಗುವಿದ್ದಾನೆ. ನನಗೆ ಇನ್ನೊಂದು ಮಗು ಬೇಕೆಂಬ ಆಸೆಯಿದೆ. ಆದರೆ ನನ್ನ ಪತ್ನಿ ಇದಕ್ಕೆ ಒಪ್ಪುತ್ತಿಲ್ಲ. ಇದರಿಂದಾಗಿ ನಿತ್ಯವೂ ನಮ್ಮ ಮನೆಯಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗ್ತಿದೆ. ಏನು ಮಾಡಲಿ?


ಮಗುವಿನ ವಿಚಾರದಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಹೊಂದಿರಬೇಕು. ಒಂದು ವೇಳೆ ನಿಮ್ಮ ಪತ್ನಿ ಎರಡನೇ ಮಗು ಬೇಡವೆನ್ನುತ್ತಿದ್ದರೆ ಅದಕ್ಕೆ ಕಾರಣವೇನೆಂದು ತಿಳಿದುಕೊಳ್ಳಿ. ಕಾರಣ ತಿಳಿದರೆ ಅದನ್ನು ಪರಿಹರಿಸಲು ನೀವೂ ಕೈ ಜೋಡಿಸಿ. ಮಗು ಮಾಡಿಕೊಳ್ಳುವುದು, ಅದನ್ನು ನೋಡಿಕೊಳ್ಳುವುದು ಕೇವಲ ಹೆಣ್ಣಿನ ಜವಾಬ್ಧಾರಿಯಲ್ಲ. ನೀವೂ ಅವಳಿಗೆ ಕೈ ಜೋಡಿಸುವ ಭರವಸೆ ನೀಡಿದರೆ ಬಹುಶಃ ನಿಮ್ಮ ಸಂಗಾತಿ ಮನಸ್ಸು ಬದಲಾಯಿಸಬಹುದು. ಆದರೆ ಇದುವೇ ಜೀವನವಲ್ಲ. ಅಂತಿಮವಾಗಿ ನಿಮಗೆ ನೀವಿಬ್ಬರೇ ಇರುವುದು ಎನ್ನುವುದನ್ನು ಮರೆಯಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ