ಗರ್ಭ ಧರಿಸಿದಾಗ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾ?
ಶನಿವಾರ, 14 ಡಿಸೆಂಬರ್ 2019 (13:25 IST)
ಸಮಸ್ಯೆ : ಸರ್ ಮದುವೆ ಆಗಿ 3 ವರ್ಷಗಳು ಆಗಿವೆ. ನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ ನಾಲ್ಕು ತಿಂಗಳು ತುಂಬುತ್ತಿದೆ . ನನ್ನ ಮಡದಿ ಗರ್ಭವತಿಯಾದಂದಿನಿಂದ ನನ್ನ ಪತ್ನಿ ಜೊತೆ ಸಂಭೋಗ ನಡೆಸಿಲ್ಲ . ನಾನು ಹಾಗೂ ಪತ್ನಿ ಬೇರೆ ಬೇರೆ ಮಲಗಬೇಕೆಂದು ಕೆಲವರು ಹೇಳುತ್ತಿದ್ದಾರೆ .
ಆದರೂ ನನ್ನ ಪತ್ನಿಗೆ ಕೂಡಿ ಮಲಗೋದ್ರಲ್ಲಿ ಆಸಕ್ತಿಯಿದೆ . ಆದರೆ ನನ್ನಾಕೆಗೆ ಏನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆಕೆಯ ಜೊತೆ ಅದನ್ನ ನಡೆಸುತ್ತಿಲ್ಲ . ಆಕೆ ನನ್ನ ಬಳಿ ಅದಕ್ಕೆ ಅಪೇಕ್ಷಿಸುತ್ತಾಳೆ . ಗರ್ಭಿಣಿ ಹೆಂಡತಿ ಜೊತೆಗೆ ಸರಸ ಎಷ್ಟು ಸೂಕ್ತ ?
ಸಲಹೆ : ಹೆಣ್ಣು ಗರ್ಭವತಿ ಆಗಿದ್ದರೂ ಕೂಡಾ ಲೈಂಗಿಕ ಸಂತೋಷವನ್ನು ಗಳಿಸುತ್ತಿರುತ್ತಾಳೆ ಮತ್ತು ಲೈಂಗಿಕ ಸಂತೋಷವನ್ನು ಗಂಡನಿಗೂ ನೀಡುತ್ತಿರುತ್ತಾಳೆ . ಮಡದಿ ಗರ್ಭಿಣಿಯಾದ ಒಂದರಿಂದ ಮೂರು ತಿಂಗಳ ತನಕ ಅದನ್ನ ನಡೆಸಬಾರದು . ಹಾಗೂ ಗರ್ಭಿಣಿಗೆ ಏಳು ತಿಂಗಳ ನಂತರ ಸಂಭೋಗ ನಡೆಸಬಾರದು .
ಇದರಿಂದ ಪಿಂಡಗೂಸಿಗೆ ತೊಂದರೆ ಅಥವಾ ಆಕೆಗೆ ಗರ್ಭಪಾತವಾಗುವ ಸಂಭವವಿದೆ . ನಾಲ್ಕರಿಂದ ಏಳು ತಿಂಗಳ ಒಳಗೆ ಮಡದಿಯ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ರತಿಸುಖವನ್ನು ವೈದ್ಯರು ಸಲಹೆ ನೀಡಿದರೆ ಮಾತ್ರ ನಡೆಸಬಹುದು . ಆದರೆ ಎಚ್ಚರ ತುಂಬಾ ಮುಖ್ಯ .
ಉದಾಹರಣೆಗೆ ನಿಂತ ಭಂಗಿಯಲ್ಲಿ ಆಕೆ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ಅದನ್ನ ನಡೆಸಬಹುದು . ಆಕೆಯ ಹೊಟ್ಟೆಯ ಮೇಲೆ ಭಾರ ಹಾಕಿದರೆ ಅಪಾಯ ಅನ್ನೋದನ್ನು ನೆನಪಿಡಿ .
ಆ್ಯಪ್ನಲ್ಲಿ ವೀಕ್ಷಿಸಿ x