ಡೀಲ್ ರಾಜ ಸಿನಿಮಾ ಜುಲೈ 29ಕ್ಕೆ ರಿಲೀಸ್

ಶನಿವಾರ, 23 ಜುಲೈ 2016 (11:15 IST)
ಕೋಮಲ್ ಸಿನಿಮಾ ಅಂದ್ರೆ ಸಾಕು ಅದರಲ್ಲಿ ಒಂದು ವಿಭಿನ್ನವಾದ ಸಾಂಗ್ ಇದ್ದೇ ಇರುತ್ತೆ. ಅವರ ಪ್ಯಾರ್ ಗೇ ಆಗ್ಬಿಟ್ಟೈತೆ ಸಾಂಗ್ ಇಂದಿಗೂ ಸಿನಿಪ್ರಿಯರ ಬಾಯಲ್ಲೇ ಗುಣುಗುಟ್ಟುತ್ತಲೇ ಇದೆ. ಇದೀಗ ಅವರ ಡೀಲ್ ರಾಜಾ ಸಿನಿಮಾ ಜುಲೈ 29ಕ್ಕೆ ತೆರೆ ಮೇಲೆ ಬರಲಿದೆ. 

 
ಡೀಲ್ ರಾಜಾ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳನ್ನು ಹುಟ್ಟು ಹಾಕಿದೆ. ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಾ ಇದ್ದಾರೆ.
 
ಕೋಮಲ್ ಹಾಗೂ ನಟಿ ಭಾನು ಶ್ರೀ ಅಭಿನಯದ ನಿನ್ನನ್ನೇ ನಂಬಿರುವ ಪದ್ಮಾವತಿ ಹಾಡು ತುಂಬಾನೇ ಡಿಫರೆಂಟ್ ಆಗಿದ್ದು ಪಡ್ಡೆ ಹೈಕ್ಳಿಗೆ ಇಷ್ಟವಾಗೋ ಎಲ್ಲಾ ಸೂಚನೆ ಸಿಕ್ಕಿದೆ. ಇನ್ನು ಈ ಹಾಡನ್ನು ಶೂಟ್ ಮಾಡೋದಕ್ಕೆ 20 ರಿಂದ 30 ಲಕ್ಷ ರೂಪಾಯಿಗಳು ಖರ್ಚಾಗಿವೆ.
 
ಸಿನಿಮಾದಲ್ಲಿ ಕೋಮಲ್ ಗೆ ನಾಯಕಿಯರಾಗಿ ಭಾನುಶ್ರೀ ಹಾಗೂ ಸುಮನ್ ರಂಗನಾಥ್ ಅವರು ಅಭಿನಯಿಸಿದ್ದಾರೆ.ರಾಜ್ ಗೋಪಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಅಭಿಮಾನ್ ರಾಯ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ