ಲೈಂಗಿಕ ಶಕ್ತಿ ಮಕ್ಕಳಾದ ಮೇಲೆ ಕಡಿಮೆ ಆಗುತ್ತಾ?

ಗುರುವಾರ, 3 ಅಕ್ಟೋಬರ್ 2019 (14:05 IST)
ಪ್ರಶ್ನೆ: ಮದುವೆಯಾದ ಹೊಸತರಲ್ಲಿ ಸಿಗೋ ಸುಖ, ಮಜಾ ಆ ಜೋಡಿಗೆ ಮಗುವಾದ ಬಳಿಕ ದೊರೆಯೋದಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತವೆ.


ದಂಪತಿಯ ನಡುವಿನ ಲೈಂಗಿಕ ಜೀವನದಲ್ಲಿ ಕೆಲವು ಬದಲಾವಣೆಯಾಗುತ್ತದೆ. ಕೆಲವರು ಒಂದು ಹೆರಿಗೆ ಬಳಿಕ ಪತಿಯೊಂದಿಗೆ ಕೂಡಿದರೆ ಮೊದಲಿನಷ್ಟು ತೃಪ್ತಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇದಕ್ಕೆ ಕಾರಣ ಏನು?

ಉತ್ತರ: ಹೊಸದಾಗಿ ಮದುವೆಯಾದಾಗ ಯೌವನ, ಆಕರ್ಷಣೆ, ಕುತೂಹಲ, ಲೈಂಗಿಕ ಉದ್ರೇಕ ಹೆಚ್ಚಾಗಿಯೆ ಇರುತ್ತದೆ. ಆದರೆ ಮಗುವಾದ ನಂತರದಲ್ಲಿ ಮಹಿಳೆಯ ಜನನಾಂಗದ ಸ್ನಾಯುವಿನಲ್ಲಿ ಆಗುವ ಬದಲಾವಣೆ ಕಾರಣವಾಗಿರಬಹುದು. ಹೆರಿಗೆಯ ಬಳಿಕ ಮಹಿಳೆಯ ಜನನಾಂಗದ ಸ್ನಾಯುಗಳು ಸಡಿಲಗೊಳ್ಳಬಹುದು. ಇದರಿಂದ ಮೊದಲಿನಷ್ಟು ತೃಪ್ತಿ ಪುರುಷರಿಗೆ ಸಿಗದೇ ಹೋಗಬಹುದು.

ಮಹಿಳೆಯರು ತಮ್ಮ ಸ್ನಾಯು ಸಹಜವಾಗಿರಲು ವ್ಯಾಯಾಮ ಮಾಡಬೇಕು. ವ್ಯಾಯಾಮವನ್ನು ನಿತ್ಯವೂ ಮಾಡುವುದರಿಂದ ದೇಹಾರೋಗ್ಯ ಕಾಪಾಡಿಕೊಳ್ಳಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ