ಲಂಡನ್: ಫುಟ್ ಬಾಲ್ ಆಡುವಾಗ ತಲೆಯಲ್ಲಿ ಡಿಚ್ಚಿ ಹೊಡೆಯುವ ಅಭ್ಯಾಸವಿದೆಯೇ? ಫುಟ್ ಬಾಲ್ ಆಡುವುದರಿಂದ ಮೆದುಳು ರೋಗ ಬರುವ ಸಾಧ್ಯತೆ ಹೆಚ್ಚಿದೆಯಂತೆ! ಹಾಗೆಂದು ಲಂಡನ್ ನ ನ್ಯೂರೋಲಜಿ ವಿವಿಯೊಂದು ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಸುದೀರ್ಘ ಸಮಯದಿಂದಲೂ ತಲೆಯಿಂದ ಡಿಚ್ಚಿ ಹೊಡೆದು ಫುಟ್ ಬಾಲ್ ಆಡುವುದರಿಂದ ಮೆದುಳು ರೋಗ ಬರುತ್ತದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದಕ್ಕಾಗಿ ಅಧ್ಯಯನಕಾರರು 14 ಫುಟ್ ಬಾಲ್ ಆಟಗಾರರ ಮೇಲೆ ಅಧ್ಯಯನ ನಡೆಸಿದ್ದಾರೆ. ಅದೂ ಸುಮಾರು ವರ್ಷ ಈ ಆಟಗಾರರನ್ನು ಪರೀಕ್ಷೆಗೊಳಪಡಿಸಿ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ.
ಇವರಿಗೆಲ್ಲಾ 60 ವಯಸ್ಸಿನಲ್ಲಿ ಮೆದುಳು ರೋಗ ಶುರುವಾಗಿತ್ತು. ಸಾಮಾನ್ಯವಾಗಿ 70 ವರ್ಷ ದಾಟಿದ ಮೇಲೆ ಮೆದುಳು ರೋಗ ಕಾಣಿಸಿಕೊಳ್ಳುತ್ತದೆ. ಈ ಪ್ರಯೋಗದಲ್ಲಿ ಪಾಲ್ಗೊಂಡ 14 ಮಂದಿಯಲ್ಲಿ 12 ಮಂದಿ ತೀವ್ರ ತರದ ಮೆದುಳು ರೋಗದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ