ವ್ಯಾಕ್ಸಿಂಗ್ ಮಾಡಿದ ನಂತರ ಹೀಗೆ ಮಾಡಲೇಬೇಡಿ

ಭಾನುವಾರ, 28 ಏಪ್ರಿಲ್ 2019 (06:50 IST)
ಬೆಂಗಳೂರು : ಕೆಲವರು ಕೈಕಾಲಿನ ಅಂದವನ್ನು ಹೆಚ್ಚಿಸಲು ವ್ಯಾಕ್ಸಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ವ್ಯಾಕ್ಸಿಂಗ್ ಮಾಡಿದ ನಂತರ ನೀವು ಮಾಡುವ ಕೆಲವು ಕೆಲಸಗಳು ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಆದ್ದರಿಂದ ನಿಮ್ಮ ಸ್ಕೀನ್ ನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು.



ವ್ಯಾಕ್ಸಿಂಗ್ ಮಾಡಿದ ನಂತರ ನಿಮ್ಮ ಚರ್ಮದಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ. ಹಾಗಾಗಿ ವ್ಯಾಕ್ಸಿಂಗ್ ಮಾಡಿದ ನಂತರ ಪ್ರತಿ ದಿನ ನೀವು ತೇವಾಂಶ ಹೆಚ್ಚಿಸುವ ಕ್ರೀಂ ಬಳಸಬೇಕಾಗುತ್ತದೆ. ವ್ಯಾಕ್ಸಿಂಗ್ ನಂತರ ಸ್ನಾನ ಮಾಡಲು ಬಯಸಿದರೆ ಶವರ್ ಬಳಸಿ. ವ್ಯಾಕ್ಸಿಂಗ್ ನಂತರ ಹೆಚ್ಚು ನೀರಿನ ಬಳಕೆ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡಬಹುದು.

 

ವ್ಯಾಕ್ಸಿಂಗ್ ಮಾಡಿದ ಮೊದಲ 2 ದಿನ ವ್ಯಾಯಾಮ ಮಾಡಬೇಡಿ. ವ್ಯಾಕ್ಸಿಂಗ್ ನಂತ್ರ ಚರ್ಮದ ರಂಧ್ರಗಳು ತೆರೆದಿರುತ್ತವೆ. ವ್ಯಾಯಾಮದ ವೇಳೆ ಬೆವರಿನ ಮೂಲಕ ಬರುವ ದೇಹದ ಕೊಳಕು ರಂಧ್ರಗಳ ಮೂಲಕ ಮತ್ತೆ ಒಳ ಸೇರುವ ಸಾಧ್ಯತೆಗಳಿರುತ್ತವೆ. ವ್ಯಾಕ್ಸಿಂಗ್ ನಂತ್ರ ಬಿಸಿ ನೀರಿನ ಬಳಕೆ ಮಾಡಬೇಡಿ. ಬಿಸಿ ನೀರು ಮೊಡವೆ ಅಥವಾ ಗುಳ್ಳೆಗೆ ಕಾರಣವಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ