ಹೋಳಿ ಆಡುವ ಮುನ್ನ ಹಾಗೂ ನಂತರ ಚರ್ಮಕ್ಕೆ ಸಂಬಂಧಪಟ್ಟ ಈ ಕೆಲಸವನ್ನು ಮಾಡಬೇಡಿ
ಶನಿವಾರ, 27 ಮಾರ್ಚ್ 2021 (08:03 IST)
ಬೆಂಗಳೂರು : ಹೋಳಿ ಹಬ್ಬದಂದು ಎಲ್ಲರೂ ಬಣ‍್ಣಗಳಲ್ಲಿ ಆಟವಾಡುತ್ತಾರೆ. ಆದರೆ ಈ ಬಣ‍್ಣಗಳು ಚರ್ಮದ ಮೇಲೆ ಹಲವು ಸಮಸ್ಯೆಗಳನ್ನುಂಟು ಮಾಡುತ್ತದೆ. ಹಾಗಾಗಿ ಹೋಳಿ ಆಟವಾಡುವವರು 48 ಗಂಟೆಗಳ ಮೊದಲು ಹಾಗೂ ನಂತರ ಚರ್ಮಕ್ಕೆ ಸಂಬಂಧಪಟ್ಟ ಈ ಕೆಲಸಗಳನ್ನು ಮಾಡಬಾರದು.
*ಹಬ್ಬದ ಮೊದಲು ಮತ್ತು ನಂತರ 48 ಗಂಟೆಗಳ ಕಾಲ ಮುಖವನ್ನು ಸ್ಕ್ರಬ್ ಮಾಡುವ , ಫೇಶಿಯಲ್ ಮಾಡುವಂತಹ ಯಾವುದೇ ಚರ್ಮದ ಚಿಕಿತ್ಸೆಗಳನ್ನು ಮಾಡಬಾರದು. ಆದರೆ ಮುಖದ ಚರ್ಮವನ್ನು ಹೈಡ್ರೇಟ್ ಮಾಡಲು ರಾತ್ರಿ ಫೇಸ್ ಪ್ಯಾಕ್ ಗಳನ್ನು ಹಚ್ಚಬಹುದು.
*ಹೋಳಿ ಆಡುವ ಮೊದಲು ಹಾಗೂ ಬಳಿಕ ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸಬೇಡಿ. ಸೌಮ್ಯವಾದ, ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸಿ.