ಯೋಗ ಮತ್ತು ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ಸಿಕ್ಕಿದೆ- ಸಿ.ಟಿ ರವಿ

ಮಂಗಳವಾರ, 20 ಆಗಸ್ಟ್ 2019 (10:09 IST)
ಬೆಂಗಳೂರು : ಯೋಗ ಮತ್ತು ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿಗೆ ನನಗೆ ತುಂಬಾ ಖುಷಿಯಾಗಿದೆ. ಬಿಎಸ್‍ ಯಡಿಯೂರಪ್ಪ ಅವರು ಪರಿಶ್ರಮದಿಂದ ಪಕ್ಷ ಕಟ್ಟಿ, ತಮ್ಮದೇ ಆದ ಸ್ವಂತಿಕೆ ಮೇಲೆ ಪಕ್ಷವನ್ನು ಬೆಳೆಸಲು ಮುಂಚೂಣಿ ಸ್ಥಾನದಲ್ಲಿ ನಿಂತವರು. ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಎಂಬ ಕೊರಗು ಇತ್ತು. ಆದರೆ ಈಗ ಆ ಅವಕಾಶವನ್ನು ಬಿಎಸ್‍ವೈ ಅವರು ಪೂರೈಸಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


 

ಏನನ್ನು ಗುರುತಿಸಿ ಸಚಿವ ಸ್ಥಾನ ಕೊಟ್ಟಿದ್ದಾರೆ ಗೊತ್ತಿಲ್ಲ. ಆದರೆ ಯೋಗ್ಯರನ್ನು ಬೆಳೆಸುವ ಕೆಲಸವನ್ನು ಪಕ್ಷ ನಿರಂತರವಾಗಿ ಮಾಡುತ್ತಾ ಬಂದಿದೆ. ಅವರು ನಿರೀಕ್ಷೆ ಇಟ್ಟಿರುವ ಯೋಗ್ಯತೆಯನ್ನು ಉಳಿಸಿಕೊಳ್ಳುತ್ತೇನೆ. ಎಲ್ಲರಿಗೂ ಯೋಗ್ಯತೆ ಇತ್ತು, ಆದರೆ ಅವರಿಗೆ ಯೋಗನೂ ಕೂಡಿಬರಬೇಕು. ಎಲ್ಲರೂ ಸಮಾಧಾನದಿಂದ ಇದ್ದರೆ ಮುಂದೊಂದು ದಿನ ಬಡ್ಡಿ ಸಮೇತ ಬರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ