ಬೆಂಗಳೂರು : ಕೆಲವರಿಗೆ ಉಗುರು ಸುತ್ತು ಸಮಸ್ಯೆ ಇರುತ್ತದೆ. ಇದರಿಂದ ಅವರು ತುಂಬಾ ನೋವನ್ನು ಅನುಭವಿಸುತ್ತಾರೆ. ಈ ನೋವು ಬೇಗ ವಾಸಿಯಾಗಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗಲು ಹೀಗೆ ಮಾಡಿ.
ನಿಂಬೆ ಹಣ್ಣಿನಲ್ಲಿ ಆಂಟಿಬ್ಯಾಕ್ಟೀರಿಯಲ್, ಉರಿಯೂತ ಶಮನ ಮಾಡುವ ಅಂಶವಿದೆ. ಆದಕಾರಣ ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರೊಳಗೆ ನಿಮ್ಮ ಉಗುರುಸುತ್ತಾದ ಬೆರಳನ್ನು ಇಟ್ಟುಕೊಂಡು ರಾತ್ರಿ ಮಲಗಿ. ಹೀಗೆ ಮಾಡಿದರೆ 2 ದಿನದಲ್ಲಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗುತ್ತದೆ.