ಮದ್ಯಪಾನ ಮಾಡುವವರು ತಮ್ಮ ಲಿವರ್ ಅನ್ನು ಶುಚಿಯಾಗಿಸಿಕೊಳ್ಳಲು ಹೀಗೆ ಮಾಡಿ

ಸೋಮವಾರ, 7 ಮೇ 2018 (06:28 IST)
ಬೆಂಗಳೂರು : ಮದ್ಯಪಾನವು ಆರೋಗ್ಯಕ್ಕೆ ಹಾನಿಕರವಾದರೂ ಕೆಲವರು ಅದನ್ನು ಸೇವಿಸದೇ ಇರಲಾರರು. ಮೊದಮೊದಲು ಖುಷಿಗಾಗಿ ಆರಂಭಿಸಿ ನಂತರ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ. ಮಿತಿಯಾಗಿ ಬಳಸುವುದನ್ನು ರೂಢಿಸಿಕೊಂಡಲ್ಲಿ ತೊಂದರೆ ಏನೂ ಇರುವುದಿಲ್ಲ. ಆದರೆ ಅದೇ ಕೆಲಸವೆಂಬಂತೆ ಕುಡಿದರೆ ದೇಹಕ್ಕೆ ಅಪಾರ ಹಾನಿ ಉಂಟಾಗುತ್ತದೆ. ಈ ಹವ್ಯಾಸ ಇರುವವರಿಗೆ ಮೊದಲು ಲಿವರ್ ಟಾಕ್ಸಿನ್ಸ್ ಎಟಾಕ್ ಆಗಿ ಇಡೀ ಲಿವರ್ ಟಾಕ್ಸಿನ್ಸ್ ನಿಂದ ತುಂಬಿಕೊಂಡಿರುತ್ತದೆ. ಮಲಿನಗಳಿಂದ ತುಂಬಿಕೊಂಡ ಲಿವರ್ ಅನ್ನು ಶುಚಿಯಾಗಿಸಿಕೊಳ್ಳಲು ಪ್ರಾಕೃತಿಕ ಚಿಕಿತ್ಸೆಯು ತುಂಬಾ ಉಪಯುಕ್ತವಾದದ್ದು.


ಬೇಕಾಗುವ  ಪದಾರ್ಥಗಳು:
ಒಣದ್ರಾಕ್ಷಿ 3 ಟೇಬಲ್ ಚಮಚ
ನೀರು 2 ಕಪ್


ತಯಾರಿಸುವ ವಿಧಾನ:
3 ಚಮಚ ಒಣದ್ರಾಕ್ಷಿಯನ್ನು 2 ಕಪ್ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಬೇಕು. ಆ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು, ಬೆಳಗ್ಗೆ ದ್ರಾಕ್ಷಿಯನ್ನು ಬೇರ್ಪಡಿಸಿ ಆ ನೀರನ್ನು ಪುನಃ ಬಿಸಿ ಮಾಡಿಕೊಂಡು ಬರೀ ಹೊಟ್ಟೆಯಲ್ಲಿ ಕುಡಿಯಬೇಕು.


ಇದರಿಂದಾಗುವ ಉಪಯೋಗಗಳು:
ಒಣದ್ರಾಕ್ಷಿಯಲ್ಲಿ ವಿಟಮಿನ್ಸ್, ಮಿನರಲ್ಸ್, ಫಾಸ್ಪರಸ್ ಹೇರಳವಾಗಿದ್ದು, ಅವು ಲಿವರ್ ಅನ್ನು ಸ್ವಚ್ಚಗೊಳಿಸುವಲ್ಲಿ, ದುರಸ್ತಿಗೊಳಿಸುವಲ್ಲಿ ಸಹಾಯವಾಗುತ್ತವೆ. ಈ ಪ್ರಕೃತಿ ಚಿಕಿತ್ಸೆಯು ಮೂತ್ರಪಿಂಡದಿಂದ ಟಾಕ್ಸಿನ್ಸ್ ಅನ್ನು ಹೊರಹಾಕಿ ಅರೋಗ್ಯವಾಗಿರಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ