ಹಸ್ತ ಮೈಥುನ ಚಟದಿಂದ ಹೊರಬರಲು ಹೀಗೆ ಮಾಡಿ

ಮಂಗಳವಾರ, 18 ಜೂನ್ 2019 (09:34 IST)
ಬೆಂಗಳೂರು : ಸಂಗಾತಿ ಇಲ್ಲದವರ ಕಾಮತೃಷೆಯನ್ನು ನೀಗಿಸಲು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಮಿತವಾಗಿ ಹಸ್ತಮಮೈಥುನ ಮಾಡಿಕೊಂಡರೆ ಉತ್ತಮ. ಆದರೆ ಅತಿಯಾದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಔಷಧಿಗಳನ್ನು ಸೇವಿಸದೆ ಈ ಅತಿಯಾದ  ಹಸ್ತ ಮೈಥುನ ಚಟದಿಂದ ಹೊರಬರುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.




* ನಿಮ್ಮ ಮನೋಬಲವು ಬಲಿಷ್ಠವಾಗಿದ್ದರೆ ಈ ಸಮಸ್ಯೆಯಿಂದ ಹೊರಬರಬಹುದು. ಹಸ್ತ ಮೈಥುನ ಚಟದಿಂದ ದೂರವಿರಬೇಕು ಎಂದು ದೃಢ ನಿರ್ಧಾರ ಮಾಡಿ ಅದನ್ನು ಪಾಲಿಸಿಕೊಂಡು ಬಂದರೆ ಅದರ ದುಷ್ಪರಿಣಾಮದಿಂದ ಪಾರಾಗಬಹುದು.


* ಹಸ್ತ ಮೈಥುನ ಚಟದಿಂದ ಹೊರಬರುವುದು ಪ್ರತಿನಿತ್ಯ ವ್ಯಾಯಾಮ ಮಾಡಿ. ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

* ಮನೆಯಲ್ಲಿ ಏಕಾಂಗಿಯಾಗಿದ್ದರೆ ಹಸ್ತಮೈಥುನ ಮಾಡಿಕೊಳ್ಳಬೇಕೆನಿಸುತ್ತದೆ. ಆದ್ದರಿಂದ ಹೆಚ್ಚಿನ ಸಮಯವನ್ನು ನಿಮ್ಮ ಗೆಳೆಯರ ಜೊತೆ ಅಥವಾ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

* ಅತಿಯಾದ ಒತ್ತಡಕ್ಕೆ ಒಳಗಾಗುವವರು ಹಸ್ತಮೈಥುನ ಚಟಕ್ಕೆ ಬೀಳುತ್ತಾರೆ. ಆದ್ದರಿಂದ ಒತ್ತಡವನ್ನು ಕಡಿಮೆಮಾಡಿಕೊಳ್ಳಿ.    
* ಲೈಂಗಿಕ ಕ್ರಿಯೆಗೆ ಉತ್ತೇಜನ ನೀಡುವಂತಹ ಆಹಾರಗಳಿಂದ ದೂರವಿರಿ.

*ಲೈಂಗಿಕ ಕ್ರಿಯೆಗೆ ಪ್ರೋತ್ಸಾಹಿಸುವ ನೀಲಿಚಿತ್ರಗಳನ್ನು ನೋಡುವ ಚಟವನ್ನು ದೂರಮಾಡಿದರೆ ಹಸ್ತ ಮೈಥುನ ಚಟದಿಂದ ಹೊರಬರುವುದು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ