ಬೆಂಗಳೂರು : ಕಾಲುಗಳಲ್ಲಿ ನೀರು ತುಂಬಿಕೊಳ್ಳುವಂತಹ ಸಮಸ್ಯೆ ನೀವು ಹಲವರಲ್ಲಿ ಕಾಣಿಸುತ್ತದೆ ಇದಕ್ಕೆ ಎಡಿಮಾ ಎಂದು ಕರೆಯುತ್ತಾರೆ. ಇದರಿಂದ ನಡೆಯುವ ಸಮಸ್ಯೆ ಎದುರಾಗುತ್ತದೆಯಲ್ಲದೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಅಲ್ಲದೇ ರಕ್ತದೊತ್ತಡ, ಕೀಲುನೋವು, ತೂಕ ಹೆಚ್ಚಾಗುವ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ಈ ಮನೆಮದ್ದುಗಳಿಂದ ನಿವಾರಿಸಬಹುದು.
*ಪಾರ್ಸೆಲ್ ಗಿಡದ ಎಲೆಗಳು ದೇಹದಲ್ಲಿರುವ ನೀರಿನಾಂಶವನ್ನು ಹೊರಹಾಕಲು ಸಹಕಾರಿಯಾಗಿದೆ. ಈ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಆರಿಸಿ ದಿನಕ್ಕೆ 2-3 ಬಾರಿ ಕುಡಿಯಿರಿ.
*ಆಪಲ್ ವಿನೆಗರ್ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಇದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿದಿನ 1 ಗ್ಲಾಸ್ ನೀರಿಗೆ 1 ಚಮಚ ಸೇಬು ವಿನೆಗರ್ ಬೆರೆಸಿ ಕುಡಿಯಿರಿ.
*ಕ್ರ್ಯಾನ್ಬೆರಿ ರಸವು ದೇಹದಲ್ಲಿರುವ ನೀರಿನ ಧಾರಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ದೇಹ ನೀರಿನ ಮಟ್ಟವನ್ನು ಸಮತೋಲಗೊಳಿಸುತ್ತದೆ. ಆದ್ದರಿಂದ ಪ್ರತಿದಿನ 1 ಗ್ಲಾಸ್ ಕ್ರ್ಯಾನ್ಬೆರಿ ರಸ ಕುಡಿಯಿರಿ ಅಥವಾ ಕ್ರ್ಯಾನ್ಬೆರಿ ಮಾತ್ರೆಗಳನ್ನು ಕೂಡ ಸೇವಿಸಬಹುದು.