ನಿಮಗೆ ಗೊತ್ತಾ? ಬೆರಿಹಣ್ಣು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸುತ್ತೆ

ಗುರುವಾರ, 23 ಜೂನ್ 2016 (11:16 IST)
ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯ ಸಂಬಂಧಿ ಕಾಯಿಲೆಗಳು, ನೆನಪಿನ ಶಕ್ತಿಯನ್ನು   ಹೆಚ್ಚಿಸುವಲ್ಲಿ ಬೆರಿಹಣ್ಣು ಅತ್ಯುತ್ತಮ ಉದಾಹರಣೆ. ಬೆರಿಹಣ್ಣು ತಿಂದ್ರೆ ನಿಮ್ಮ ಹೃದಯ ಸಂಬಂಧಿ ಕಾಯಿಲೆಗಳನ್ನು ಹಾಗೂ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚುಸುತ್ತದೆ ಎಂದು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಅಲ್ಲದೇ ಅತಿ ಚಿಕ್ಕ ವಯಸ್ಸಿನಲ್ಲೇ ದೊಡ್ಡವರಂತೆ ಕಾಣುವವರು ಈ ಹಣ್ಣನ್ನು ತಿಂದ್ರೆ ಇನ್ನು ಉತ್ತಮ ಎಂದು ಸಂಶೋಧನೆ ಹೇಳಿದೆ. 
ಬೆರಿಹಣ್ಣುಗಳಿಂದ ಆರೋಗ್ಯ ಪ್ರಯೋಜನಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಅಮೇರಿಕಾದಲ್ಲಿ ಈ ಸಮಿಕ್ಷೆ ನಡೆಸಿದ್ದು, 2000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 
 
ಬೆರಿಹಣ್ಣಿನ ಆರೋಗ್ಯ ಪ್ರಯೋಜನಗಳು ಹಲವು... ಕ್ಯಾನ್ಸರ್ ನಿರ್ಮೂಲನೆ ಮಾಡುವಲ್ಲಿ ಬೆರಿಹಣ್ಣು ರಾಮಬಾಣದಂತೆ ಕೆಲಸ ಮಾಡಬಲ್ಲದಂತೆ. ಅಲ್ಲದೇ ಹೃದಯ ಸಂಬಂಧಿ ಕಾಯಿಲೆಗಳನ್ನು ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯಕಾರಿಯಾಗಬಲ್ಲದ್ದು, ದೃಷ್ಟಿ ಹಾಗೂ ಮೆಮರಿ ಸುಧಾರಣೆಗೆ ಇದು ಸಹಾಯ ಮಾಡುತ್ತದೆ.
 
ಜನರು ಬೆರಿಹಣ್ಣಿನ ಪ್ರಯೋಜನೆಗಳನ್ನು ಅರಿತಿರಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೇರಿಕಾದಲ್ಲಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಅಧಿಕವಾಗಿವೆಯಂತೆ. ಆದ್ದರಿಂದ ಬೆರಿಹಣ್ಣಿನ ಪ್ರಯೋಜನವನ್ನು ಕಂಡು ಹಿಡಿಯಲಾಗಿದೆಯಂತೆ. ಆದ್ದರಿಂದ ಹೆಚ್ಚು ಜನರು ಬೆರಿಹಣ್ಣಿನ ಕಡೆಗೆ ಒಲವು ತೋರುತ್ತಿದ್ದಾರೆ. ತಮ್ಮ ನಿತ್ಯ ಜೀವನದಲ್ಲಿ ಹೆಚ್ಚು ಬಳಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ