ಮಕ್ಕಳಲ್ಲಿ ಆತ್ಮಗೌರವವನ್ನು ಹೇಗೆ ಬೆಳೆಸಬೇಕು ಗೊತ್ತಾ...?

ಬುಧವಾರ, 14 ಫೆಬ್ರವರಿ 2018 (06:39 IST)
ಬೆಂಗಳೂರು : ಮಕ್ಕಳಿಗೆ ಎಳವೆಯಲ್ಲಿಯೇ ಆತ್ಮಗೌರವದ ಪಾಠವನ್ನು ಹೇಳಿಕೊಟ್ಟರೆ ಅವರು ಮುಂದೆ ಉತ್ತಮ ನಡವಳಿಕೆ ಹೊಂದಿರುವ ವ್ಯಕ್ತಿಯಾಗಿ ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಯಾವಾಗ ಮತ್ತು ಯಾವ ರೀತಿಯಲ್ಲಿ ಆತ್ಮಗೌರವವನ್ನು ಬೆಳೆಸಬೇಕು ಎಂದು ತಿಳಿದುಕೊಳ್ಳುವುದು ಅತಿ ಅಗತ್ಯ. ಇಂತಹ ವಿಷಯಗಳನ್ನು ಜಾಗ್ರತೆಯಿಂದ ನಿಭಾಯಿಸಬೇಕು.


ಮಕ್ಕಳನ್ನು ಮಾತನಾಡಲು ಬಿಡಿ:- ಮಕ್ಕಳು ಏನನ್ನಾದರೂ ಹೇಳಲು ಪ್ರಯತ್ನಿಸಿದರೆ ನೀವು ಅವರನ್ನು ಸುಮ್ಮನಿರುವಂತೆ ಹೇಳಬೇಡಿ. ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿ ಹಾಗೂ ಅವರು ಹೇಳುವ ವಿಷಯಗಳತ್ತ ಆಸಕ್ತಿ ವಹಿಸಿ. ಮಕ್ಕಳಿಗೆ ಸದಾ ಛೀಮಾರಿ ಹಾಕಿದರೆ ಅವರ ಆತ್ಮಗೌರವ ಕುಂದುತ್ತದೆ.

 
ಪ್ರತಿಭೆಯನ್ನು ಗುರುತಿಸಿ:- ನಿಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪ್ರಶಂಸೆ ಮಾಡುವುದು ಅತಿ ಅಗತ್ಯವಾಗಿದೆ. ಇದರಿಂದ ಮಕ್ಕಳಿಗೆ ತಮ್ಮ ಮೇಲೆ ನಂಬಿಕೆ ಮೂಡುತ್ತದೆ ಹಾಗೂ ಅವರು ತಮ್ಮ ಪ್ರತಿಭೆಯನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಾರೆ.



ಅವರ ನಿರ್ಧಾರವನ್ನು ಗೌರವಿಸಿ:-. ಅವರು ತೆಗೆದುಕೊಳ್ಳುವ ನಿರ್ಧಾರವನ್ನು ನೀವು ಗೌರವಿಸುವ ಮೂಲಕ ಅವರ ಆತ್ಮಗೌರವವನ್ನು ಹೆಚ್ಚಿಸಬೇಕು. ಮಕ್ಕಳ ಜೊತೆ ಸದಾ ಇದ್ದು ಅವರಿಗೆ ಮಾರ್ಗದರ್ಶನ ಮಾಡುವುದು ಕೂಡಾ ಅತ್ಯಗತ್ಯ ಅವರು ಯಾವುದೇ ವಿಷಯದಲ್ಲಿ ಎಲ್ಲೆ ಮೀರದಂತೆ ನೋಡಿಕೊಳ್ಳಲು ಅವರ ಮೇಲೆ ಸದಾ ನಿಗಾ ಇಟ್ಟರೆ ಉತ್ತಮ.


ಸ್ನೇಹಿತರನ್ನು ಪರೀಕ್ಷಿಸಿ:- ನಿಮ್ಮ ಮಕ್ಕಳ ಸ್ನೇಹಿತರ ಗುಂಪನ್ನು ಪರಿಶೀಲನೆ ಮಾಡಬೇಕು. ಮಕ್ಕಳು ಸೂಕ್ತ ಸ್ನೇಹಿತರನ್ನೇ ಹೊಂದಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಅವರ ಸುತ್ತಮುತ್ತ ಅವರದೇ ವಯಸ್ಸಿನ ಸಂತೋಷಭರಿತರಾಗಿರುವ ಮತ್ತು ಹುರುಪಿನಿಂದ ಕೂಡಿರುವ ಮಕ್ಕಳಿರುವಂತೆ ನೋಡಿಕೊಳ್ಳಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ