ಬೆಂಗಳೂರು : ನಮ್ಮ ದೇಹ ಆರೋಗ್ಯವಾಗಿರಲು ಎಲ್ಲಾ ಪೋಷಕಾಂಶಗಳು, ಜೀವಸತ್ವಗಳು ಅವಶ್ಯಕ. ಅದರಲ್ಲಿ ಒಮೆಗಾ3 ಪೋಷಕಾಂಶ ನಮ್ಮನ್ನು ಹಲವು ಕಾಯಿಲೆಗಳಿಂದ ರಕ್ಷಿಸಿ ದೇಹವನ್ನು ಬಲಿಷ್ಠಗೊಳಿಸುತ್ತದೆ. ಆದರೆ ನಮ್ಮ ದೇಹಕ್ಕೆ ಒಮೆಗಾ3 ಕಡಿಮೆಯಾದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
1.ನಿಮ್ಮ ಕೂದಲು, ಚರ್ಮ ಮತ್ತು ಉಗುರುಗಳು ದುರ್ಬಲವಾಗುತ್ತವೆ.
2. ನಿಮಗೆ ಎಲ್ಲಾ ಸಮಯದಲ್ಲೂ ಆಯಾಸ ಮತ್ತು ನಿದ್ರೆ ಬರುತ್ತದೆ.
3. ಏಕಾಗ್ರತೆ ಮತ್ತು ಗಮನಹರಿಸುವ ಶಕ್ತಿ ಕಡಿಮೆಯಾಗುತ್ತದೆ.
4.ಕಿವಿ ಮೇಣ ಅತಿಯಾಗಿ ಉತ್ಪಾದನೆಯಾಗುತ್ತದೆ.
5.ಮಹಿಳೆಯರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತದೆ.