ರಾತ್ರಿ ಬಿಸಿ ನೀರಿಗೆ ಏಲಕ್ಕಿ ಹಾಕಿ ಕುಡಿದರೆ ಏನಾಗುತ್ತದೆ ಗೊತ್ತಾ?
ಮಂಗಳವಾರ, 22 ಸೆಪ್ಟಂಬರ್ 2020 (08:39 IST)
ಬೆಂಗಳೂರು : ಏಲಕ್ಕಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಬಿಸಿ ನೀರಿಗೆ ಏಲಕ್ಕಿ ಹಾಕಿ ಕುಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ರಾತ್ರಿ ಊಟ ಆದ ಬಳಿಕ ಮಲಗುವ ಮುಂಚೆ 1 ಗ್ಲಾಸ್ ಬಿಸಿ ನೀರಿಗೆ ಏಲಕ್ಕಿ ಪುಡಿಯನ್ನು ಹಾಕಿ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ಕೂದಲ ಬೇರುಗಳನ್ನು ಬಲಪಡಿಸಿ ಕೂದಲುದುರುವ ಸಮಸ್ಯೆ ನಿವಾರಿಸುತ್ತದೆ. ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ. ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಜೀರ್ಣ ಕ್ರಿಯೆ ಉತ್ತಮವಾಗಿ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.