ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳು ತಿಂದರೆ ಏನಾಗುತ್ತದೆ ಗೊತ್ತಾ?

ಮಂಗಳವಾರ, 20 ಆಗಸ್ಟ್ 2019 (09:00 IST)
ಬೆಂಗಳೂರು : ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದನ್ನು ಬೆಳಿಗ್ಗಿನ ಸಮಯದಲ್ಲಿ  ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.




ಮೊಳಕೆ ಕಾಳುಗಳನ್ನು ಬೆಳಗ್ಗಿನ ಸಮಯದಲ್ಲಿ ಸೇವಿಸಬೇಕು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ. ಮೊಳಕೆ ಕಾಳುಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ರಕ್ತ ಹೀನತೆಯಿಂದ ದೂರವಿರಬಹುದು.


ಡಯಟ್ ಮಾಡುವವರಿಗೆ ಮೊಳಕೆಕಾಳು ತುಂಬಾ ಉತ್ತಮ. ಯಾಕೆಂದರೆ ಇದರಲ್ಲಿರುವ ಫೈಬರ್ ನ ಅಂಶ ಹೊಟ್ಟೆ ತುಂಬುವಂತೆ ಮಾಡುತ್ತದೆ. ಹೊಟ್ಟೆ ತುಂಬುವ ಕಾರಣ ಆಗಾಗ ತಿನ್ನುವುದು ಕಡಿಮೆಯಾಗಿ ತೂಕ ಇಳಿಯುತ್ತದೆ. ಮೊಳಕೆ ಕಾಳುಗಳಲ್ಲಿ ಅಗಾಧ ಪ್ರಮಾಣದ ವಿಟಮಿನ್ ಸಿ ಇರುವ ಕಾರಣ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ