ಬೆಂಗಳೂರು : ಗೋಡಂಬಿ ತಿನ್ನಲು ತುಂಬಾ ರುಚಿಕರವಾಗಿರುವುದರಿಂದ ಎಲ್ಲರೂ ಅದನ್ನು ತಿನ್ನಲು ಇಷ್ಟಪಡುತ್ತಾರೆ. ಇಂತಹ ರುಚಿಕರವಾದ ಗೋಡಂಬಿಯನ್ನು ಪ್ರತಿದಿನ ತಿಂದರೆ ಏನಾಗುತ್ತದೆ ಗೊತ್ತಾ?
ಗೋಡಂಬಿಯಲ್ಲಿ ಸೋಡಿಯಂ, ಮೆಗ್ನೀಶಿಯಂ, ಸೆಲೇನಿಯಂ, ಜೀವಸತ್ವ ಇ, ಕ್ಯಾಲ್ಸಿಯಂ ಮುಂತಾದವು ಅಧಿಕ ಪ್ರಮಾಣದಲ್ಲಿದೆ. ಇದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.
ಅಧ್ಯಯನದ ಪ್ರಕಾರ ಹಲ್ಲು ಹುಳುಕಾಗುವುದು, ಕ್ಷಯ ರೋಗ ಮತ್ತು ಕುಷ್ಟ ರೋಗವನ್ನು ತಡೆಯಲು ಪ್ರತಿದಿನ ಗೋಡಂಬಿಯನ್ನು ಸೇವಿಸಿ. ಇವುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಗೋಡಂಬಿಯಲ್ಲಿರುವ ಪೋಷಕಾಂಶಗಳು ಕೊಲ್ಲುತ್ತವೆ ಎನ್ನಲಾಗಿದೆ.