ಬಿಸಿ ನೀರು ಕುಡಿಯುವುದರಿಂದ ಏನಾಗುತ್ತದೆ ಗೊತ್ತಾ?

ಮಂಗಳವಾರ, 13 ನವೆಂಬರ್ 2018 (07:19 IST)
ಬೆಂಗಳೂರು : ತಣ್ಣೀರು ಕುಡಿಯುವುದೆಂದರೆ ಕೆಲವರಿಗೆ ತುಂಬಾ ಇಷ್ಟ. ಬಿಸಿ ನೀರನ್ನು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ಊಟದ ನಂತರ ತಣ್ಣೀರು ಕುಡಿಯುವುದರಿಂದ ಆಹಾರ ಪದಾರ್ಥದಲ್ಲಿ ಇರುವ ಎಣ್ಣೆಯ ಪದಾರ್ಥವು ಗಟ್ಟಿಗೊಳ್ಳುತ್ತದೆ. ಇದರಿಂದ ಕರುಳಿನ ಕೆಳಭಾಗದಲ್ಲಿ ಕೊಬ್ಬಿನಂಶ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಇದು ದೀರ್ಘಾವಧಿಯ ಕರುಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದ್ದರಿಂದ ಬಿಸಿ ನೀರು ಕುಡಿದರೆ ಉತ್ತಮ.


ಹೊಟ್ಟೆ ಖಾಲಿ ಇರುವಾಗ ಬೆಚ್ಚಗಿನ ನೀರು ಕುಡಿದರೆ ಜೀರ್ಣ ಕ್ರಿಯೆ ಸುಗಮವಾಗುತ್ತದೆ. ಬೆಚ್ಚಗಿನ ನೀರು ರಕ್ತದ ಹರಿವು ಆರೋಗ್ಯಕರವಾಗಿರುತ್ತದೆ. ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗದು. ಜೊತೆಗೆ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ