ಹೊಸ ಬಟ್ಟೆಗಳನ್ನು ಒಗೆಯದೇ ಧರಿಸಿದರೆ ಏನಾಗುತ್ತದೆ ಗೊತ್ತಾ...?
ಸೋಮವಾರ, 22 ಜನವರಿ 2018 (07:27 IST)
ಬೆಂಗಳೂರು : ನಮ್ಮಲ್ಲಿ ಹಲವರಿಗೆ ಹಬ್ಬದ ದಿನಗಳಲ್ಲಿ ಹೊಸ ಬಟ್ಟೆಗಳನ್ನು ತರುವುದು ರೂಢಿ. ಇನ್ನು ಕೆಲವರು ಸಾಮಾನ್ಯ ದಿನಗಳಲ್ಲಿಯೂ ಹೊಸ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಹೊಸ ಬಟ್ಟೆಗಳನ್ನು ತಂದ ತಕ್ಷಣ ಧರಿಸವ ಕಾತುರ ಹಲವರಲ್ಲಿರುತ್ತದೆ.
ಆದರೆ ಹೊಸ ಬಟ್ಟೆಗಳನ್ನು ಧರಿಸಲು ಕೆಲವು ಜಾಗ್ರತೆಗಳನ್ನು ವಹಿಸಬೇಕು. ಅವುಗಳನ್ನು ಒಗೆದು ಧರಿಸಬೇಕೆಂಬುದು ಹಲವು ಕಾರಣಗಳಿವೆ. ಬಟ್ಟೆಗಳು ಮುದುಡಿಕೊಳ್ಳದಂತೆ, ಆಕರ್ಷಣೀಯವಾಗಿರಲು ಅವುಗಳಿಗೆ ರಾಸಾಯನಿಕಗಳನ್ನು ಉಪಯೋಗಿಸುವುದರಿಂದ ಅಲರ್ಜಿ, ಕೆರೆತ ಉಂಟಾಗುವ ಅವಕಾಶವಿದೆ. ಇಂದಿನ ದಿನಗಳಲ್ಲಿ ಬಟ್ಟೆಗಳನ್ನು ಕೊಳ್ಳುವ ಮೊದಲು ಟ್ರಯಲ್ ನೋಡುವುದು ಅಭ್ಯಾಸವಿದೆ. ಹೀಗೆ ಒಬ್ಬರು ಧರಿಸಿದ ಬಟ್ಟೆಗಳನ್ನು ನಾವು ಧರಿಸುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬಟ್ಟೆಗಳನ್ನು ಒಗೆದು ಧರಿಸುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ