ಜನನಾಂಗದ ಬಳಿ ಇರುವ ಕೂದಲು ತೆಗೆದರೆ ಏನೆಲ್ಲಾ ರೋಗ ಬರುತ್ತೆ ಗೊತ್ತಾ…?
ಸೋಮವಾರ, 25 ಡಿಸೆಂಬರ್ 2017 (08:52 IST)
ಬೆಂಗಳೂರು: ಸ್ತ್ರೀ ಪುರುಷರಿಗೆ ಸೂಕ್ಷ್ಮವಾದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಬಹಳಷ್ಟು ಮಂದಿ ಅದನ್ನು ಕ್ಲೀನ್ ಶೇವ್ ಮಾಡಿಕೊಳ್ಳುತ್ತಾರೆ. ಕೆಲವರು ಹೇರ್ ರಿಮೂವರ್ ನಂತಹ ಪದ್ಧತಿಗಳಿಂದ ಇದನ್ನು ತೊಲಗಿಸುತ್ತಾರೆ. ಆದರೆ ಈ ಕೂದಲುಗಳನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು ಎಂದು ಅಧ್ಯಾನಗಳು ದೃಢಪಡಿಸಿವೆ.
ಸೂಕ್ಷ್ಮವಾದ ಜಾಗಗಳನ್ನು ರಕ್ಷಣೆ ಮಾಡಲು ಅಲ್ಲಿ ಕೂದಲು ಬೆಳೆಯುತ್ತದೆ. ಈ ಕೂದಲುಗಳನ್ನು ತೆಗೆದರೆ ಆ ಜಾಗದಲ್ಲಿ ಇನ್ ಫೆಕ್ಷನ್ ಗಳು, ಚರ್ಮದ ಮೇಲೆ ದದ್ದುಗಳು ಆಗುವ ಸಾಧ್ಯತೆಗಳಿವೆ. ಅನೇಕ ವಿಧದ ವೈರಸ್, ಬ್ಯಾಕ್ಟೀರಿಯಾಗಳಿಂದ ಆ ಕೂದಲು ರಕ್ಷಣೆ ಕೊಡುವ ಕಾರಣ ಅದನ್ನು ತೆಗೆಯಬಾರದು ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ತೆಗೆಯಲೆಬೇಕೆಂದರೆ ಸ್ವಲ್ಪ ಮಟ್ಟಿಗೆ ಕತ್ತರಿಸುವುದು ಉತ್ತಮ ಎನ್ನುತ್ತಾರೆ.
ಸೂಕ್ಷ್ಮವಾದ ಜಾಗಗಳಿಂದ ಕೂದಲು ತೆಗೆದ ನಂತರ ಅದು ಮತ್ತೆ ಹುಟ್ಟುತ್ತದೆ. ಆಗ ಅಲ್ಲಿ ತುರಿಕೆ ಉಂಟಾಗುತ್ತದೆ. ಅದನ್ನು ತುರಿಸಿಕೊಳ್ಳುವುದರಿಂದ ಆ ಭಾಗದ ಚರ್ಮ ಅಲರ್ಜಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಕೂದಲು ಇರುವುದರಿಂದ ಲೈಂಗಿಕ ರೋಗಗಳು ಬರುವ ಅವಕಾಶ ಕಡಿಮೆ ಎಂದು ಅಧ್ಯಾಯನಗಳು ಹೇಳುತ್ತದೆ. ಜನನೇಂದ್ರಿಯಗಳ ಬಳಿ ಉಷ್ಣತೆಯನ್ನು ಅಲ್ಲಿನ ಕೂದಲು ನಿಯಂತ್ರಿಸುತ್ತದೆ. ಕೂದಲೇ ಇಲ್ಲವಾದಲ್ಲಿ ಜನನೇಂದ್ರಿಯಗಳ ಬಳಿ ಉಷ್ಣತೆ ಜಾಸ್ತಿಯಾಗಿ ಸಮಸ್ಯೆ ಉಂಟಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ