ದೇಹ ಕಬ್ಬಿಣದ ಅಂಶವನ್ನು ಸರಿಯಾಗಿ ಹೀರಿಕೊಳ್ಳಬೇಕಾದಲ್ಲಿ ಏನು ಮಾಡಬೇಕು ಗೊತ್ತಾ?

ಭಾನುವಾರ, 28 ಏಪ್ರಿಲ್ 2019 (06:54 IST)
ಬೆಂಗಳೂರು : ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬುದು  ಎಲ್ಲರಿಗೂ ತಿಳಿದೇ ಇದೆ. ಆದರೆ ಯಾವ ಆಹಾರವನ್ನು ಯಾವಾಗ ಹಾಗೂ ಯಾವುದರ ಜೊತೆ ಸೇವನೆ ಮಾಡಬೇಕೆಂಬ ವಿಷಯ ಕೆಲವರಿಗೆ ತಿಳಿದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಆಹಾರ ಸೇವನೆ ವೇಳೆ ಯಾವ ಪದಾರ್ಥದ ಜೊತೆ ಯಾವ ಪದಾರ್ಥ ಸೇವನೆ ಮಾಡಬೇಕು ಎಂಬುದು ಅವಶ್ಯವಾಗಿ ತಿಳಿದಿರಬೇಕು.

ನಮ್ಮ ದೇಹ ಕಬ್ಬಿಣದ ಅಂಶವನ್ನು ಸರಿಯಾಗಿ ಹೀರಿಕೊಳ್ಳಬೇಕಾದಲ್ಲಿ ಅದಕ್ಕೆ ವಿಟಮಿನ್ ಸಿ ಬೇಕಾಗುತ್ತದೆ. ಹಾಗಾಗಿ ಪಾಲಾಕ್ ಜೊತೆ ಟೋಮೋಟೋ ಅಥವಾ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಸೇವನೆ ಮಾಡಬೇಕು. ಕಬ್ಬಿಣದ ಅಂಶವಿರುವ ಪದಾರ್ಥ ಸೇವನೆ ಮಾಡುವ ವೇಳೆ ಅವಶ್ಯವಾಗಿ ಟೋಮೋಟೋವನ್ನು ಬಳಸಿ.

 

ಹಾಗೇ ಬಾಳೆಹಣ್ಣು ತಿನ್ನಲು ಮಧ್ಯಾಹ್ನ ಸರಿಯಾದ ಸಮಯ. ಈ ಸಮಯದಲ್ಲಿ ಬಾಳೆಹಣ್ಣು ತಿನ್ನುತ್ತ ಬಂದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಪ್ರಬಲವಾಗುತ್ತದೆ. ಹಾಗೇ  ಗೋಧಿ ಚಪಾತಿ ಜೊತೆ ಅವಶ್ಯವಾಗಿ ತುಪ್ಪವನ್ನು ಸೇವನೆ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಆದರೆ ಇದು ಮಿತ ಪ್ರಮಾಣದಲ್ಲಿದ್ದರೆ ಒಳ್ಳೆಯದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ