ಮುಖಕ್ಕೆ ಕ್ರೀಂ ಯಾವಾಗ ಹಚ್ಚಿದರೆ ಉತ್ತಮ ಗೊತ್ತಾ?

ಶುಕ್ರವಾರ, 15 ಮೇ 2020 (08:07 IST)
ಬೆಂಗಳೂರು : ಕೆಲವರು ಬೆಳ್ಳಗಾಗಲು ಹಲವು ಬಗೆಯ ಕ್ರೀಂಗಳನ್ನು ಮುಖಕ್ಕೆ ಹಚ್ಚುತ್ತಾರೆ. ಆದರೆ ಈ ಕ್ರೀಂಗಳನ್ನು ಬೆಳಗಿನ ಸಮಯದಲ್ಲಿ ಹಚ್ಚುವುದೇ ಉತ್ತಮವೇ? ರಾತ್ರಿ ಹೊತ್ತು ಹಚ್ಚಿದರೆ ಉತ್ತಮವೇ? ಎಂಬ ಮಾಹಿತಿ ಇಲ್ಲಿದೆ ನೋಡಿ.  


ಕ್ರೀಂಗಳನ್ನು ಬೆಳಗಿನ ಸಮಯದಲ್ಲಿ ಹಚ್ಚುವುದಕ್ಕಿಂತ ರಾತ್ರಿ ಹೊತ್ತು ಹಚ್ಚಿದರೆ ತುಂಬಾ ಪರಿಣಾಮಕಾರಿ. ಅದರಲ್ಲೂ ನೈಸರ್ಗಿಕ ಕ್ರೀಂಗಳನ್ನು ರಾತ್ರಿ ಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು.


ಏಕೆಂದರೆ ಮಲಗಿದ್ದಾಗ ನಾವು ವಿಶ್ರಾಂತಿ ಪಡೆಯುತ್ತಿರುವಾಗ ತ್ವಚೆ ಕಣಗಳು ಹೆಚ್ಚು ಕೆಲಸ ಮಾಡುತ್ತವೆ. ಆದ್ದರಿಂದ ಕ್ರೀಂಗಳನ್ನು ರಾತ್ರಿ ಹೊತ್ತು ಮುಖಕ್ಕೆ ಹಚ್ಚಿದರೆ ಕಾಂತಿಯುತವಾದ, ಯೌವನಭರಿತವಾದ ಮುಖವನ್ನು ಪಡೆಯಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ