ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಸೇವಿಸುವುದರಿಂದ ಹುಟ್ಟುವ ಮಗು ಬೆಳ್ಳಗಾಗುತ್ತದೆಯೇ?
ಶುಕ್ರವಾರ, 25 ಸೆಪ್ಟಂಬರ್ 2020 (15:07 IST)
ಬೆಂಗಳೂರು : ಕೇಸರಿ ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಸೇವಿಸುವುದರಿಂದ ಹುಟ್ಟುವ ಮಗು ಬೆಳ್ಳಗಾಗುತ್ತದೆ ಎಂದು ಹೇಳುತ್ತಾರೆ. ಇದು ನಿಜವೇ? ಎಂಬುದನ್ನು ತಿಳಿದುಕೊಳ್ಳಿ.
ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಸೇವಿಸುವುದರಿಂದ ಹುಟ್ಟುವ ಮಗು ಬೆಳ್ಳಗಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮಗುವಿನ ಬಣ್ಣಕ್ಕೂ ಕೇಸರಿಗೂ ಯಾವುದೇ ಸಂಬಂಧವಿಲ್ಲ. ಕೇಸರಿಯನ್ನು ಗರ್ಭಿಣಿಯರು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಆದರೆ ಕೇಸರಿಯನ್ನು ಮಿತವಾಗಿ ಸೇವಿಸಬೇಕು, ಇಲ್ಲವಾದರೆ ಗರ್ಭಪಾತವಾಗುವ ಸಂಭವವಿದೆ.