ಬೆವರುತ್ತಿರುವಾಗ ಸ್ನಾನ ಮಾಡಬೇಡಿ!

ಗುರುವಾರ, 4 ಮೇ 2017 (07:32 IST)
ಬೆಂಗಳೂರು: ಬೇಸಿಗೆಯಲ್ಲಿ ವಿಪರೀತ ಬೆವರು. ಬೆವರು ಸುರಿದು ಮೈ ವಾಸನೆ ಬರುತ್ತಿದೆ ಎಂದಾದರೆ, ಒಮ್ಮೆ ಸ್ನಾನ ಮಾಡಿ ಬಿಡೋಣ ಎನಿಸೋದು ಸಹಜ.

 
ಸಾಮಾನ್ಯವಾಗಿ ನಾವೆಲ್ಲರೂ ಮಾಡುವುದೂ ಅದನ್ನೇ. ಆದರೆ ವಿಪರೀತ ಬೆವರುತ್ತಿರುವಾಗ ಸ್ನಾನ ಮಾಡುವುದು ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಾ? ಕಠಿಣ ಕೆಲಸ ಮಾಡುವಾಗ ಬೆವರುವುದು ಸಹಜ. ಹಾಗಂತ ಖಂಡಿತಾ ತಣ್ಣೀರು ಸ್ನಾನವಂತೂ ಮಾಡಲೇಬೇಡಿ.

ಯಾಕೆಂದರೆ ಬೆವರು ಎಂದರೆ ದೇಹದ ಮಲಿನತೆಯನ್ನು ಹೊರ ಹಾಕುವ ಪ್ರಕ್ರಿಯೆ. ಈ ಸಂದರ್ಭದಲ್ಲಿ ಸ್ನಾನ ಮಾಡುವುದರಿಂದ ಬೆವರು ಗ್ರಂಥಿಗಳಿಗೆ ತಡೆಯೊಡ್ಡಿದಂತಾಗುತ್ತದೆ. ಇದರಿಂದ ಬೆವರು ಕ್ರಿಯೆಗೆ ತಡಯುಂಟಾಗುತ್ತದೆ.

ಹೀಗಾಗಿ ತಣ್ಣೀರ ಸ್ನಾನದಿಂದ ದೇಹದ ಆರೋಗ್ಯ ಹಾಳಾಗಬಹುದು. ಹಾಗಾಗಿ ಬೆವರುತ್ತಿರುವಾಗ ಸ್ನಾನ ಮಾಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ