ಚಕ್ಕೋತ ಹಣ್ಣು ಹುಳಿಯಾಗಿ ಸಿಹಿಯಾಗಿ ಮಿಶ್ರ ರುಚಿಯಿರುವ ಈ ಹಣ್ಣನ್ನು ವೈಜ್ಞಾನಿಕವಾಗಿ ಸಿಟ್ರಸ್ ಮ್ಯಾಕ್ಸಿಮಾ ಅಥವಾ ಸಿಟ್ರಸ್ ಗ್ರ್ಯಾಂಡಿಸ್ ಎಂದು ಕರೆಯುತ್ತಾರೆ, ಹಿಂದಿಯಲ್ಲಿ "ಚಕೋತ್ರ", ಸಂಸ್ಕೃತದಲ್ಲಿ "ಕರುಣ", ಬಂಗಾಳಿಯಲ್ಲಿ "ಬಟಾಬಿಲೇಬು", ತೆಲುಗಿನಲ್ಲಿ "ಪಂಪಾರಪನಾಸ" ಮತ್ತು ತಮಿಳಿನಲ್ಲಿ "ಬಾಂಬಿಲಿಮಾಸ್" ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ರುಟೇಸೀ ಕುಟುಂಬಕ್ಕೆ ಸೇರಿದ ಈ ಹಣ್ಣು ಸಿಟ್ರಸ್ ಪ್ರಭೇದಗಳಲ್ಲಿ ಇದು ಎಲ್ಲಕ್ಕಿಂತ ದೊಡ್ಡ ಹಣ್ಣು ಎನ್ನಲಾಗುತ್ತದೆ.
ಚಕ್ಕೋತ ಒಂದು ನೈಸರ್ಗಿಕವಾದ ಸಿಟ್ರಸ್ ಹಣ್ಣು ಆದರೆ ಹೊಂದಿದ್ದು ಅವು ಪ್ರಮುಖ ಹಸಿರು ಬಣ್ಣದಲ್ಲಿರುತ್ತವೆ. ಹೂವುಗಳು ಪ್ರಕಾಶಮಾನವಾದ ಬಿಳಿ ಮತ್ತು ಐದು ದಳಗಳು ಮತ್ತು ಒಂದು ವಿಶಿಷ್ಟವಾದ ಆಹ್ಲಾದಕರ ಸುವಾಸನೆಯನ್ನು ಹೊಂದಿರುತ್ತವೆ; ಹೀಗಾಗಿ ಅವುಗಳ ಸಾರಗಳನ್ನು ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.
ಆಯುರ್ವೇದದ ಪ್ರಾಚೀನ ಭಾರತೀಯ ಔಷಧ ಪದ್ಧತಿಯಲ್ಲಿ ಎಲೆ ಮತ್ತು ಹೂವಿನ ಅಂಶಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಹಣ್ಣನ್ನು ಸಲಾಡ್, ಸೂಪ್, ನೂಡಲ್ಸ್, ಫ್ರೈಡ್ ರೈಸ್ ಮತ್ತು ಕೇಕ್ ಮತ್ತು ಪುಡಿಂಗ್ ನಂತಹ ಆಹಾರಗಳಲ್ಲಿ ಬಳಕೆ ಮಾಡಲಾಗುತ್ತದೆ. ಚಕ್ಕೋತ ಜ್ಯೂಸ್ ದೇಹವನ್ನು ಶಾಂತವಾಗಿರಸಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಹಣ್ಣಿನ ಗಟ್ಟಿಯಾದ ಹೊರ ಸಿಪ್ಪೆಯನ್ನು ಸೇವನೆ ಮಾಡಲು ಸಾಧ್ಯವಾಗದಿದ್ದಲ್ಲಿ ಮರ್ಮಲೇಡ್ ಮತ್ತು ಜಾಮ್ ತಯಾರಿಸಲು ಬಳಕೆ ಮಾಡಲಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕೇವಲ ಅರ್ಧ ಚಕ್ಕೋತ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೈನಂದಿನ ಅಗತ್ಯವನ್ನು ಪೂರೈಸುತ್ತದೆ. ವಿಟಮಿನ್ ಸಿ ರಕ್ತ ಪರಿಚಲನೆಗಾಗಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದಲ್ಲದೆ, ಬಿಳಿ ರಕ್ತಕಣಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಯಲ್ಲಿ, ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆಪೊಟ್ಯಾಸಿಯಮ್ ಮಟ್ಟಗಳಲ್ಲಿ ಅಧಿಕವಾಗಿರುವ ಚಕ್ಕೋತ ಸಾಮಾನ್ಯ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಸ್ನಾಯುವಿನ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ. ಕೆಟ್ಟ ಐಆಐ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ಉತ್ತಮ ಊಆಐ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತದೆ.
ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ
ಚಕ್ಕೋತ ದೇಹಕ್ಕೆ ಬೇಕಾದ ನಾರುಗಳನ್ನು ಒಳಗೊಂಡಿರುತ್ತದೆ, ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆ ಸರಾಗಗೊಳಿಸಲು ಸಹಾಯ ಮಾಡಿ ಮಲಬದ್ದತೆ ನಿವಾರಣೆ ಮಾಡುತ್ತದೆ. ಅಲ್ಲದೇ ಅಜೀರ್ಣವನ್ನು ಸಹ ಶಮನ ಮಾಡುತ್ತದೆ.
ಮೂತ್ರದ ಸೋಂಕಿನ ವಿರುದ್ಧ ಹೋರಾಡುತ್ತದೆ
ಚಕ್ಕೋತ ಅಪಾರ ಪ್ರಮಾಣದ ವಿಟಮಿನ್ ಸಿ ಅನ್ನು ನೀಡುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದರ ಆ್ಯಂಟಿ ಆಕ್ಸಿಡೆಂಟ್ಗಳು ದೇಹದಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಮೂತ್ರದ ಸೋಂಕುಗಳನ್ನು ನಿವಾರಣೆ ಮಾಡುತ್ತದೆ.
ರಕ್ತಹೀನತೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ
ವಿಟಮಿನ್ ಸಿ ಮಾನವ ದೇಹದಲ್ಲಿ ಒಂದು ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ, ಇದು ಸೇವಿಸಿದ ಆಹಾರದಿಂದ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಪ್ರಮಾಣದಲ್ಲಿ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ, ಚಕ್ಕೋತ ಹಣ್ಣುಗಳನ್ನು ತಿನ್ನುವುದು ಕಬ್ಬಿಣವನ್ನು ಹೆಚ್ಚು ಮಾಡುತ್ತದೆ. ಅಲ್ಲದೇ ಮೂಳೆಗಳು, ಕೀಲುಗಳನ್ನು ಬಲಪಡಿಸಲು, ಚರ್ಮದ ರಚನೆಯನ್ನು ಸಮೃದ್ಧಗೊಳಿಸಲು, ಸ್ನಾಯು ಸೆಳೆತವನ್ನು ಶಮನಗೊಳಿಸಲು, ಬಹಳ ಪ್ರಯೋಜನಕಾರಿಯಾಗಿದೆ.
ಮಧುಮೇಹಕ್ಕೆ ಒಳ್ಳೆಯದು
ಇದಲ್ಲದೆ, ಈ ಹಣ್ಣು ಸಾಕಷ್ಟು ಪ್ರಮಾಣದ ಆಹಾರದ ನಾರುಗಳು, ಖನಿಜಗಳಾದ ಸತು, ತಾಮ್ರ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ತುಂಬಿದ್ದು, ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.