ಸೆಕ್ಸ್ ನಂತರ ಈ ಕೆಲಸಗಳನ್ನು ಮಾಡಲೇಬೇಡಿ!

ಬುಧವಾರ, 17 ಜನವರಿ 2018 (08:21 IST)
ಬೆಂಗಳೂರು: ಮಿಲನ ಕ್ರಿಯೆ ಮಾಡುವಾಗ ಕೆಲವು ಷರತ್ತುಗಳಿರುವಂತೆಯೇ ಮಿಲನ ಕ್ರಿಯೆ ನಂತರ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದಿದೆ. ಅವು ಯಾವುವು ನೋಡೋಣ.
 

ಮೂತ್ರ ವಿಸರ್ಜನೆ
ಸೆಕ್ಸ್ ನಂತರ ದೇಹ ಸುಸ್ತಾಗಿರುತ್ತದೆ. ಹಾಸಿಗೆಯಿಂದ ಎದ್ದೇಳಲು ಸೋಮಾರಿತನ ಕಾಡಬಹುದು. ಆದರೆ ಮಹಿಳೆಯರು ಕಡ್ಡಾಯವಾಗಿ ಸೆಕ್ಸ್ ನಂತರ ಮೂತ್ರ ವಿಸರ್ಜನೆ ಮಾಡಬೇಕು. ಇದರಿಂದ ಸೆಕ್ಸ್ ಸಂದರ್ಭದಲ್ಲಿ ಯೋನಿ ಮೂಲಕ ವೈರಾಣುಗಳು ದೇಹ ಪ್ರವೇಶಿಸುವುದನ್ನು ತಡೆಗಟ್ಟಬಹುದು.

ಒದ್ದೆ ಬಟ್ಟೆಯಿಂದ ಒರೆಸಬೇಡಿ!
ಸೆಕ್ಸ್ ನಂತರ ಮಹಿಳೆಯರು ಯೋನಿ ಶುಚಿಗೊಳಿಸಬೇಕು ನಿಜ. ಆದರೆ ಒದ್ದೆ ಬಟ್ಟೆಯಿಂದ ಮಾಡಿದರೆ ಉರಿ ಅಥವಾ ನವೆ ಬರುವ ಸಾಧ್ಯತೆಯಿದೆ. ಅದರಲ್ಲೂ ವಿಶೇಷವಾಗಿ ಸೋಪ್ ಬಳಸಿ ಶುಚಿ ಮಾಡಬೇಡಿ. ಇದರಲ್ಲಿರುವ ಯೋನಿಯಲ್ಲಿ ಸಹಜವಾಗಿರುವ ತೇವಾಂಶ ನಾಶವಾಗುತ್ತದೆ.

ಬಿಸಿ ನೀರಿನ ಸ್ನಾನ ಬೇಡ!
ಸೆಕ್ಸ್ ನಂತರ ಫ್ರೆಶ್ ಆಗಲು ಸ್ನಾನ ಮಾಡುವುದೇನೋ ಸರಿ. ಹಾಗಂತ ಅತಿಯಾದ ಬಿಸಿ ನೀರಿಗೆ ಧುಮುಕಬೇಡಿ. ಸೆಕ್ಸ್ ನಂತರ ಯೋನಿ ಸ್ವಲ್ಪ ಹೆಚ್ಚೇ ತೆರೆದುಕೊಂಡಿರುತ್ತದೆ. ಅತಿಯಾದ ಬಿಸಿ ನೀರಿಗೆ ಮೈಯೊಡ್ಡಿದಾಗ ವೈರಾಣು ಹರಡುವ ಸಾಧ್ಯತೆಯಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ