ಹೃದಯ ಕಾಪಾಡಲು ಈ ಆಹಾರ ಸೇವನೆ ಬೇಡ

ಸೋಮವಾರ, 25 ಸೆಪ್ಟಂಬರ್ 2017 (07:13 IST)
ಬೆಂಗಳೂರು: ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ವಿಷಯ ಯಾವತ್ತೂ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅಂತಹ ಅಮೂಲ್ಯ ಹೃದಯವನ್ನು ಸುರಕ್ಷಿತವಾಗಿಡಲು ಕೆಲವು ಆಹಾರಗಳನ್ನು ಆದಷ್ಟು  ಕಡಿಮೆ ಮಾಡುವುದೇ ಒಳ್ಳೆಯದು.

 
ಉಪ್ಪು
ಉಪ್ಪು ಹೆಚ್ಚು ತಿಂದರೆ ರಕ್ತದೊತ್ತಡ ಹೆಚ್ಚುತ್ತದೆ ಎನ್ನಲಾಗುತ್ತದೆ. ಸಹಜವಾಗಿ ರಕ್ತದೊತ್ತಡ ಹೆಚ್ಚಾದಂತೆ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಹಾಗಾಗಿ ಉಪ್ಪು ಆದಷ್ಟು ಕಡಿಮೆ ಬಳಸಿದರೆ ಒಳ್ಳೆಯದು.

ರಿಫೈನ್ಡ್ ಆಹಾರ
ಪಿಜ್ಜಾ, ಬ್ರೆಡ್, ಬಿಳಿ ಅಕ್ಕಿ ಅನ್ನದಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಜಾಸ್ತಿ. ಇದು ನಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಮಾಡುತ್ತದೆ. ಇದರಿಂದ ಹೃದಯ ಖಾಯಿಲೆ ಅಪಾಯ ಹೆಚ್ಚು.

ಸಾಫ್ಟ್ ಡ್ರಿಂಕ್
ಸಾಫ್ಟ್ ಡ್ರಿಂಕ್ ಗಳಲ್ಲೂ ಸಕ್ಕರೆ ಅಂಶ ನಿಗದಿಗಿಂತ ಹೆಚ್ಚಿರುತ್ತದೆ. ಅಗತ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ನಮ್ಮ ದೇಹದಲ್ಲಿದ್ದರೆ, ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಬರುವುದು ಸಹಜ.

ಕರಿದ ತಿಂಡಿಗಳು
ಕರಿದ ತಿಂಡಿಗಳು ಬಾಯಿಗೆ ರುಚಿಕೊಡುತ್ತಾದಾದರೂ ಇದರಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಜಾಸ್ತಿ. ಅಲ್ಲದೆ, ಕೊಬ್ಬು ಹಾಗೂ ಸೋಡಿಯಂ ಅಂಶ ಜಾಸ್ತಿಯಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ