ಮೆಂತೆಕಾಳು ಸೇವಿಸಿ; ದೇಹವನ್ನು ಕಾಡುವ ರೋಗಗಳನ್ನು ನಿವಾರಿಸಿ

ಸೋಮವಾರ, 19 ಮಾರ್ಚ್ 2018 (12:27 IST)
ಬೆಂಗಳೂರು: ಮೆಂತೆಕಾಳಿನಿಂದ ನಮ್ಮ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಪ್ರತಿನಿತ್ಯ ಮೆಂತೆಕಾಳು ಸೇವಿಸುವುದರಿಂದ ದೇಹಕ್ಕೆ ಕಾಡುವ ಕೆಲವೊಂದು ಸಮಸ್ಯೆಗಳಿಂದ ದೂರವಿರಬಹುದು. ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.


ಮೆಂತೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ರುಬ್ಬಿ ತಲೆಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತಲೆಸ್ನಾನ ಮಾಡಿದರೆ ತಲೆಕೂದಲು ಹೊಳೆಯುವುದು ಜತೆಗೆ ಉದ್ದವಾಗಿ ಬೆಳೆಯುತ್ತದೆ.


ಎದೆ ಹಾಲು ಕಡಿಮೆ ಇರುವ ಸ್ತ್ರೀಯರು ಮೆಂತೆ ಕಾಳಿನ ಗಂಜಿ ಮಾಡಿಕೊಂಡು ತಿಂದರೆ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
ಇನ್ನು ದೇಹದಲ್ಲಿ ಬಾವು, ನೋವು ಇದ್ದರೆ ಮೆಂತೆ ಬೀಜವನ್ನು ನೀರಿನಲ್ಲಿ ರುಬ್ಬಿ ಹಚ್ಚಿದರೆ ನೋವು ಶಮನ ಆಗುತ್ತದೆ.
ರಕ್ತದೊತ್ತಡ ಇರುವವರು ಮೆಂತೆಕಾಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ರಕ್ತದೊತ್ತಡ ಹತೋಟಿಗೆ ಬರುತ್ತದೆ.
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮೆಂತೆ ನಿವಾರಿಸುತ್ತದೆ.


ಮೆಂತೆ ಕಾಳು ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ