ಬಿಸಿಲಿನ ತಾಪಮಾನ ಹೆಚ್ಚಾಗಿದೆ. ರಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರ.
ಹೀಗಾಗಿ ಮನೆಯಲ್ಲಿರುವ ಮಕ್ಕಳು, ವೃದ್ಧರಿಗೆ ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ ಕೊಡಿ. ಪ್ರತಿದಿನ ರಾಗಿ ಮಾಲ್ಟ್ ಮಾಡಿ ಕುಡಿದರೆ ತೂಕವನ್ನು ಕಡಿಮೆ ಮಾಡಬಹುದು. ರಾಗಿ ಮಾಲ್ಟ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
* ರಾಗಿ ಹಿಟ್ಟು- 1 ಕಪ್
* ಟೀಸ್ಪೂನ್ ಬೆಲ್ಲ- 2ಚಮಚ
* ಹಾಲು- 1ಕಪ್
* ಏಲಕ್ಕಿ ಪುಡಿ -ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
* ಮೊದಲನೆಯದಾಗಿ, ಸಣ್ಣ ಕಪ್ನಲ್ಲಿ ರಾಗಿ ಹಿಟ್ಟು ನೀರನ್ನು ಹಾಕಿ ಯಾವುದೇ ಉಂಡೆಗಳಾಗದಂತೆ ಮಿಶ್ರ ಮಾಡಿಟ್ಟಿರಿ.
* ಈಗ ಪಾತ್ರೆಗೆ ನೀರನ್ನು ಹಾಕಿ, ನೀರು ಕುದಿಯಲು ಬಂದ ನಂತರ ಕರಗಿದ ರಾಗಿ ಹಿಟ್ಟಿನಲ್ಲಿ ಸೇರಿಸಿ.
* ಮಿಶ್ರಣವು 5 ನಿಮಿಷಗಳ ನಂತರ ದಪ್ಪವಾಗುತ್ತದೆ. ಆಗ ಬೆಲ್ಲ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
* ನಂತರ ಹಾಲು, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ರಾಗಿ ಗಂಜಿ ಅಥವಾ ರಾಗಿ ಮಾಲ್ಟ್ ಸವಿಯಲು ಸಿದ್ಧವಾಗುತ್ತದೆ.