ಎಣ್ಣೆಯುಕ್ತ ಆಹಾರ ಸೇವಿಸಿದ ತಕ್ಷಣ ಇದನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ

ಭಾನುವಾರ, 20 ಡಿಸೆಂಬರ್ 2020 (06:50 IST)
ಬೆಂಗಳೂರು :  ಎಣ್ಣೆಯುಕ್ತ ಆಹಾರಪದಾರ್ಥಗಳು ತುಂಬಾ ರುಚಿಕರವಾಗಿರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಅದನ್ನು ಎಲ್ಲರೂ ಸೇವಿಸುತ್ತಾರೆ. ಹಾಗಾಗಿ ಎಣ್ಣೆಯುಕ್ತ ಆಹಾರ ಸೇವಿಸಿದ ತಕ್ಷಣ ಇದನ್ನು ಸೇವಿಸಿ ಅದರಿಂದಾಗುವ ಹಾನಿಯನ್ನು ಕಡಿಮೆ ಮಾಡಿಕೊಳ್ಳಿ.

ಎಣ್ಣೆಯುಕ್ತ ಆಹಾರ ಸೇವಿಸಿದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ದೇಹವನ್ನು ಸೇರಿ ಆರೋಗ್ಯವನ್ನು ಹಾಳು ಮಾಡುತ್ತದೆ. ಅಲ್ಲದೇ ಇದು ದೇಹದ ಕೊಬ್ಬನ್ನು ಹೆಚ್ಚಿಸಿ ದೇಹದ ತೂಕವನ್ನು ಹೆಚ್ಚಿಸುತ್ತದೆ.

ಹಾಗಾಗಿ ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ನಿಂಬೆ ರಸವನ್ನು ನೀರಿಗೆ ಬೆರೆಸಿ ಕುಡಿಯಿರಿ. ನಿಂಬೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಹಾಗು ಇದು ಕೊಬ್ಬನ್ನು ಕರಗಿಸುತ್ತದೆ ಮತ್ತು ಇನ್ಸುಲಿನ್ ‍ಪ್ರತಿರೋದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಟ್ಟೆಯ ಸಮಸ್ಯೆ ಹಾಗೂ ತೂಕ ಹೆಚ್ಚಳ ಸಮಸ್ಯೆ ಕಾಡಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ