ಸಿಗರೇಟು ತ್ಯಜಿಸಬೇಕೆನ್ನುವವರು ಈ ಆಹಾರಗಳನ್ನು ಸೇವಿಸಿ

ಶನಿವಾರ, 5 ಡಿಸೆಂಬರ್ 2020 (08:34 IST)
ಬೆಂಗಳೂರು : ಕೆಲವರಿಗೆ ಸಿಗರೇಟು ಸೇದುವ ಚಟವಿರುತ್ತದೆ. ಆದರೆ ಅದನ್ನು ಬಿಟ್ಟುಬಿಡಬೇಕೆಂದರೂ ಅವರಿಗೆ ಅದನ್ನು ಬಿಡಲು ಆಗುವುದಿಲ್ಲ . ಹಾಗಾಗಿ ಅಂತವರು ಈ ಆಹಾರ ನಿಯಮಗಳನ್ನು ಪಾಲಿಸಿ. ಇದರಿಂದ ಬಹಳ ಬೇಗನೆ ಸಿಗರೇಟನ್ನು ತ್ಯಜಿಸಬಹುದು.

ಡ್ರೈ ಫೂಟ್ಸ್, ಮೊಳಕೆ ಕಾಳು, ಬೀನ್ಸ್, ಒಣ ದ್ರಾಕ್ಷಿ ಗಳನ್ನು ಹೆಚ್ಚಾಗಿ ಸೇವಿಸಿ. ಬ್ರೆಡ್, ಕಾಫಿ, ಚಹಾ, ಡೈರಿ ಉತ್ಪನ್ನಗಳು ಮತ್ತು ಮಾಂಸದಂತಹ ಆಹಾರಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಆಹಾರದ ಆಮ್ಲೀಯ ಅಂಶವನ್ನು ಕಡಿಮೆ ಮಾಡಿ.

ಅಲ್ಲದೇ ನಿಕೋಟಿನ್ ಕೊರತೆಯು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಿದರೂ ಸಹ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನೀವು ಹಸಿವಿನಿಂದ ಬಳಲುತ್ತಿರುವಾಗ ಕಚ್ಚಾಹಣ್ನುಗಳನ್ನು ಮತ್ತು ತರಕಾರಿಗಳಂತಹ ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ