ನಿಯಮಿತವಾಗಿ ಈ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಶನಿವಾರ, 18 ಸೆಪ್ಟಂಬರ್ 2021 (07:16 IST)
ಆಹಾರ ನಮ್ಮ ಆರೋಗ್ಯದ ಗುಟ್ಟು. ಆಯುರ್ವೇದದಲ್ಲಿ ಪ್ರತಿನಿತ್ಯ ಕೆಲ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಲಾಗಿದೆ. ಪ್ರತಿನಿತ್ಯ ಕೆಲ ಆಹಾರ ಸೇವನೆ ಮಾಡುವುದ್ರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅನೇಕ ರೋಗಗಳಿಂದ ನಾವು ದೂರವಿರಬಹುದು.

ನೆಲ್ಲಿಕಾಯಿ ಮತ್ತು ಬಾರ್ಲಿ : ದಿನನಿತ್ಯದ ಆಹಾರದಲ್ಲಿ ನೆಲ್ಲಿಕಾಯಿ ಮತ್ತು ಬಾರ್ಲಿಯನ್ನು ಸೇರಿಸುವುದರಿಂದ ಅನೇಕ ಪ್ರಯೋಜನವಿದೆ.ಇದರಲ್ಲಿ ಹಲವು ಪೋಷಕಾಂಶಗಳಿದ್ದು, ನಮ್ಮ ದೇಹವನ್ನು ರೋಗದಿಂದ ರಕ್ಷಿಸುತ್ತವೆ.
ಅಕ್ಕಿ

ಕಂದು ಅಕ್ಕಿ ಸೇವನೆ ಆರೋಗ್ಯಕರ. ಆದ್ರೆ ಡಯಟ್ ನಲ್ಲಿ ಬಿಳಿ ಅಕ್ಕಿ ಕೂಡ ಇರಲಿ. ನಿಯಮತವಾಗಿ ಇದ್ರ ಸೇವನೆ ಮಾಡವುದರಿಂದ ಅನೇಕ ಲಾಭವಿದೆ.
ಹಸುವಿನ ಹಾಲು ಮತ್ತು ತುಪ್ಪ

 ಹಸುವಿನ ಹಾಲು ಮತ್ತು ತುಪ್ಪವನ್ನು ಆಹಾರ ಪಟ್ಟಿಯಲ್ಲಿರಲಿ. ಜೇನು ತುಪ್ಪ ಮತ್ತು ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ದ್ವಿದಳ ಧಾನ್ಯ  

ಪ್ರತಿದಿನ ಬೇಳೆಕಾಳುಗಳನ್ನು ಸೇವಿಸಬೇಕು. ದ್ವಿದಳ ಧಾನ್ಯಗಳನ್ನು ನಿಯಮಿತವಾಗಿ ತಿನ್ನುವುದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆಯುರ್ವೇದದ ಪ್ರಕಾರ, ದ್ವಿದಳ ಧಾನ್ಯಗಳಲ್ಲಿ ಹೆಸರು ಬೇಳೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಸಿರು ಸೊಪ್ಪುಗಳ ಕೂಡ ನಮ್ಮ ಆರೋಗ್ಯ ವೃದ್ಧಿಸುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ