ಬುದ್ಧಿವಂತ ಮಗು ಹುಟ್ಟಬೇಕೆಂಬ ಹಂಬಲವಿದ್ದರೆ ಗರ್ಭಿಣಿಯರು ಇದನ್ನು ಸೇವಿಸಿ

ಶನಿವಾರ, 15 ಜೂನ್ 2019 (06:34 IST)
ಬೆಂಗಳೂರು : ಗರ್ಭಿಣಿಯರಿಗೆ ತಮ್ಮ ಆರೋಗ್ಯವಾಗಿ ಹುಟ್ಟುವ ಜೊತೆಗೆ ಬುದ್ಧಿವಂತವಾದ ಮಗು ಹುಟ್ಟಬೇಕು ಎಂಬ ಹಂಬಲವಿರುತ್ತದೆ.  ಅಂತವರ 4 ತಿಂಗಳಿನಿಂದ ಪ್ರತಿದಿನ ಇದನ್ನು ಸೇವಿಸಿ. ಇದರಿಂದ ಬುದ್ಧಿವಂತ ಹಾಗು ಚುರುಕಾದ ಮಗು ಹುಟ್ಟುತ್ತದೆ. 




ಗರ್ಭಿಣಿಯರು 4 ತಿಂಗಳಿನಿಂದ ಪ್ರತಿದಿನ ರಾತ್ರಿ ಒಂದೆರಡು ಬಾದಾಮಿಯನ್ನು ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹೀಗೆ ಮಾಡುವುದರಿಂದ ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಚುರುಕಾಗುತ್ತದೆ ಜೊತೆಗೆ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ.


ಜೊತೆಗೆ ಮೊಟ್ಟೆಯಲ್ಲಿ ಅತಿ ಹೆಚ್ಚಿನ  ಪ್ರೋಟಿನ್ ಅಂಶ ಇರುವ ಕಾರಣ ಇದು ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣೆಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಎರಡು ಅಥವಾ ಮೂರು ಮೊಟ್ಟೆ ಇರಲಿ.


ಮಗುವಿನ ಮೆದುಳು ಬೆಳವಣಿಗೆಗೆ ಒಮೇಗಾ 3 ಫ್ಯಾಟಿ ಆ್ಯಸಿಡ್ ಗಳು ಬಹಳ ಮುಖ್ಯ. ಮೀನು, ಸೋಯಾಬೀನ್ಸ್, ಪಾಲಾಕ್ ಸೊಪ್ಪು, ವಾಲ್ ನಟ್ ಗಳಲ್ಲಿ ಈ ಪೋಷಕಾಂಶ ಹೇರಳವಾಗಿರುತ್ತದೆ. ಗರ್ಭಿಣಿಯರು ಇಂಥವುಗಳನ್ನು ಸೇವನೆ ಮಾಡಿದರೆ ತುಂಬಾ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ