ಹೃದಯ ಕಾಯಿಲೆ ಅಪಾಯ ತಗ್ಗಿಸಲು ಎಗ್ ಸೇವನೆ

ಗುರುವಾರ, 23 ನವೆಂಬರ್ 2023 (23:20 IST)
ದೇಹದ ಪೋಷಣೆಗೆ ಬೇಕಾಗುವಂತಹ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಮೊಟ್ಟೆಯನ್ನು ತಿಂದರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಿಂದಿನಿಂದಲೂ ಮೊಟ್ಟೆಯ ಬಗ್ಗೆ ಕೆಲವು ಕೆಟ್ಟ ಅಭಿಪ್ರಾಯಗಳು ಇದ್ದವು. 
 
ಆದರೆ ಸಂಶೋಧನೆಗಳು ಮೊಟ್ಟೆಯಲ್ಲಿ ಇರುವಂತಹ ಲಾಭಗಳನ್ನು ಪತ್ತೆ ಮಾಡಿದ ಬಳಿಕ ಮೊಟ್ಟೆಯು ಜನಪ್ರಿಯವಾಗುತ್ತಾ ಸಾಗಿದೆ. ಹೃದಯದ ಕಾಯಿಲೆ ಮತ್ತು ಮೊಟ್ಟೆಯ ಮಧ್ಯೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಹೇಳಿದೆ
 
 ಆದರೆ ವಾರದಲ್ಲಿ ಮೂರು ಮೊಟ್ಟೆಗಿಂತ ಹೆಚ್ಚು ಸೇವಿಸಬಾರದು ಎಂದು ಹವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸೂಚಿಸಿದೆ. ಮೊಟ್ಟೆಯಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಿಕೊಂಡು ಸೇವಿಸಬಹುದು. ಆದರೆ ಮೊಟ್ಟೆ ಬೇಯಿಸಿ ತಿಂದರೆ ಅದರಲ್ಲಿರುವಂತಹ ಪೋಷಕಾಂಶಗಳು ಹೆಚ್ಚು ಲಭ್ಯವಾಗುವುದು. ಬೇಯಿಸಿದ ಮೊಟ್ಟೆಯಿಂದ ಯಾವೆಲ್ಲಾ ಲಾಭಗಳು ಸಿಗುವುದು ಎಂಬುದನ್ನು ಮುಂದೆ ಓದಿ
 
ಮೊಟ್ಟೆಯು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನಕ್ಕೊಂದು ಮೊಟ್ಟೆ ಸೇವನೆ ಮಾಡಿದರೆ ಮೊಟ್ಟೆಯಲ್ಲಿ ಇರುವಂತಹ ಪೋಷಕಾಂಶಗಳಾಗಿರುವ ಲುಟೇನ್ ಮತ್ತು ಜಿಕ್ಸನ್ಥಿನ್ ಅಕ್ಷಿಪಟಲದ ಅವನತಿಯನ್ನು ತಡೆಯುವುದು. ಈ ಅಂಶಗಳು ಬೇರೆಲ್ಲಾ ಆಹಾರಕ್ಕಿಂತಲೂ ಹೆಚ್ಚಾಗಿ ಮೊಟ್ಟೆಯಲ್ಲಿ ಕಂಡು ಬರುವುದು.

ಮೊಟ್ಟೆ ಸೇವಿಸಿದರೆ ಅದರಿಂದ ಕಣ್ಣಿನ ಪೊರೆ ಸಮಸ್ಯೆಯು ನಿವಾರಣೆ ಆಗುವುದು. ಮೊಟ್ಟೆಯಲ್ಲಿ ಸಲ್ಫರ್ ಅಂಶವಿದೆ ಮತ್ತು ಇದರಲ್ಲಿ ವಿಟಮಿನ್ ಡಿ ಜತೆಗೆ ಇತರ ಕೆಲವೊಂದು ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರಿಂದ ಕೂದಲು ಮತ್ತು ಉಗುರು ಬೆಳೆಯಲು ಸಹಕಾರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ