ಪುರುಷರು ಪ್ರತಿ ದಿನ ಬೆಳಿಗ್ಗೆ ಮೊಟ್ಟೆ ಸೇವಿಸಿದರೆ ಆರೋಗ್ಯಕ್ಕೆ ಲಾಭ

ಸೋಮವಾರ, 6 ನವೆಂಬರ್ 2023 (14:39 IST)
ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಮೊಟ್ಟೆ ಸೇವನೆ ಬಹಳ ಮುಖ್ಯ. ದಿನಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು. ದಿನಕ್ಕೊಂದು ಮೊಟ್ಟೆಹೊಟ್ಟೆ ತುಂಬಿಸುವ ಜೊತೆಗೆ ಆರೋಗ್ಯ ಕಾಪಾಡುವಲ್ಲಿಯೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. 

ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ನಿಮ್ಮ ಆಹಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಮೊಟ್ಟೆ ತಿಂದರೆ, ಅನೇಕ ಪ್ರಯೋಜನಗಳು ಸಿಗುತ್ತವೆ.
 
ಈಗಿನ ಲೈಫ್ ನಲ್ಲಿ ಯಾವುದಕ್ಕೂ ಸಮಯವಿರುವುದಿಲ್ಲ. ಹೀಗಾಗಿ ಎಷ್ಟೋ ಜನ ಆರೋಗ್ಯದ ಕಡೆ ಗಮನ ಹರಿಸುವುದೇ ಇಲ್ಲ. ಇದೀಗ ಬೇಸಿಗೆಯೂ (Summer) ಆರಂಭವಾಗಿದೆ. ಆರೋಗ್ಯದ ಬಗ್ಗೆ ಗಮನ ಹರಿಸಲೇ ಬೇಕು. ಆರೋಗ್ಯ ಕಾಪಾಡಿಕೊಳ್ಳುವ ವಿಚಾರ ಬಂದಾಗ ನಾವು ಸೇವಿಸುವ ಆಹಾರ (Food)ಮುಖ್ಯವಾಗಿರುತ್ತದೆ. ಯಾವ ಆಹಾರ ಸೇವಿಸಿದರೆ ಹೇಗೆ ಪ್ರಯೋಜನ ಎನ್ನುವುದನ್ನು ತಿಳಿದರೆ  ಅರ್ಧದಷ್ಟು ಸಮಸ್ಯೆ ಪರಿಹಾರವಾದಂತೆ. 
 
 
ಪ್ರೋಟೀನ್ ನ್ ಮೂಲ ಮೊಟ್ಟೆ : 
ಮೊಟ್ಟೆಗಳಲ್ಲಿ ಸಾಕಷ್ಟು ಪ್ರೋಟೀನ್  ಇದೆ. ನಾವು ಸೇವಿಸುವ ಆಹಾರದಿಂದ ಹೆಚ್ಚಿನ ಪ್ರಮಾಣದ ಅಮೈನೋ ಆಸಿಡ್ ಅನ್ನು ಪಡೆಯಬಹುದು. ಅದೇ ಒಂದು ಮೊಟ್ಟೆಯಿಂದ ಅಷ್ಟೇ ಪ್ರಮಾಣದ ಪ್ರೋಟೀನ್ ದೇಹ ಸೇರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದು ಮೊಟ್ಟೆಯನ್ನು ತಿಂದರೆ, ದೇಹಕ್ಕೆ ಬೇಕಾಗುವ ಪ್ರೋಟಿನ್ ಸಿಗುತ್ತದೆ.   
 
 
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : 
ಮೊಟ್ಟೆಯಲ್ಲಿ ಸೆಲೆನಿಯಮ್ ಎಂಬ ಅಂಶ ಕಂಡುಬರುತ್ತದೆ.  ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮೊಟ್ಟೆಗಳಲ್ಲಿರುವ ಸೆಲೆನಿಯಮ್ ಸೋಂಕುಗಳ  ವಿರುದ್ಧ ಹೋರಾಡಲು ಕೂಡಾ  ಸಹಾಯ ಮಾಡುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ