ಸಂಗಾತಿಯು ನಿಮ್ಮ ಜೊತೆ ಪದೇ ಪದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂದರೆ ಹೀಗೆ ಮಾಡಿ!

ಸೋಮವಾರ, 20 ಆಗಸ್ಟ್ 2018 (07:15 IST)
ಬೆಂಗಳೂರು : ಗಂಡ ಹೆಂಡತಿಯು ಮಿಲನದ ವೇಳೆಯಲ್ಲಿ ತುಂಬಾ ಸುಖ ಪಡೆಯಬೇಕೆಂದರೆ ಕೆಲವು ಟಿಪ್ಸ್ಗಳನ್ನು ಅನುಸರಿಸಲೇಬೇಕು. ಅದರಲ್ಲೂ ಮೊದಲ ಬಾರಿಯ ಶೃಂಗಾರದ ವೇಳೆಯಲ್ಲಿ ಅಂತೂ ಈ ಟಿಪ್ಸ್ ತಪ್ಪದೇ ಪಾಲಿಸಿದರೆ ಮಾತ್ರ ನಿಮ್ಮ ಸಂಗಾತಿಯ ಮನಸ್ಸನ್ನು ಗೆಲ್ಲಬಹುದು.


ಕೆಲ ಗಂಡಸರು ಶೃಂಗಾರದ ವೇಳೆಯಲ್ಲಿ ಮಹಿಳೆಯರನ್ನು ತುಂಬಾ ಹಿಂಸಿಸುತ್ತಾರೆ. ಹಾಗೇ ಎಂದೂ ಮಾಡಬಾರದು, ಆಕೆಯನ್ನು ಪ್ರೀತಿಯಿಂದ ಒಲಿಸಿಕೊಳ್ಳಬೇಕು. ಮೊದಲ ರಾತ್ರಿಯಲ್ಲೂ ಕೂಡ ಆಕೆಗೆ ತುಂಬಾ ಭಯ ಇರುತ್ತದೆ. ಆಕೆಯನ್ನುಪ್ರೀತಿಯಿಂದ ಒಲಿಸಿಕೊಂಡು ನಂತರ ಆಕೆಗೂ ಕೂಡ ಆ ಭಾವನೆ ಬಂದ ಮೇಲೆ ನೀವೂ ಮಿಲನ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.


ಆದರೆ ಹೆಚ್ಚಿನವರು ಮಿಲನದ ನಂತರ ಮಾಡುವ ದೊಡ್ಡ ತಪ್ಪು ಯಾವುದೆಂದರೆ ಗಂಡಸರು ಶೃಂಗಾರ ಮುಗಿಸಿದ ನಂತರ ಒಂದೇ ಸಲ ಆ ಜಾಗದಿಂದ ಹೊರಬಂದುಬಿಡುತ್ತಾರೆ. ಅಥವಾ ನಿದ್ದೆಗೆ ಜಾರಿ ಬಿಡುತ್ತಾರೆ. ಅಥವಾ ನೀನ್ಯಾರೋ ಏನೋ ಅನ್ನುವ ಮಟ್ಟಿಗೆ ಇಳಿದುಬಿಡುತ್ತಾರೆ. ಈ ರೀತಿ ಯಾವತ್ತು ನಿಮ್ಮ ಸಂಗಾತಿಯ ಜೊತೆ ನಡೆದುಕೊಳ್ಳಬೇಡಿ. ಎಲ್ಲಾ ಮುಗಿದ ಮೇಲೂ ಸಂಗಾತಿಯ ಜೊತೆ ಕಾಲ ಕಳೆಯಿರಿ. ಒಂದೆರಡು ಪ್ರೀತಿಯ ಮಾತುಗಳನ್ನಾಡಿ, ಒಬ್ಬೊರಿಗೊಬ್ಬರು ಅಪ್ಪಿಕೊಂಡು ಮಲಗಿ ಮತ್ತೊಮ್ಮೆ ಇಬ್ಬರಿಗೂ ಶೃಂಗಾರ ಮಾಡುವ ಮನಸ್ಸಿದ್ದರೆ ಮಾಡಬಹುದು.


ಶೃಂಗಾರ ಮುಗಿದ ಮೇಲೆ ಮಹಿಳೆಯರ ಕೈಯನ್ನು ನಿಮ್ಮ ಎದೆಮೇಲೆ ಹಾಕಿಕೊಂಡು ನಿಮ್ಮ ಎದೆಯ ಮೇಲಿರುವ ಕೂದಲಿನ ಜೊತೆಗೆ ಆಟವಾಡಲು ಬಿಡಿ. ಇದನ್ನು ಮಹಿಳೆಯರು ತುಂಬಾ ಇಷ್ಟಪಡುತ್ತಾರೆ. ಹೀಗೆಲ್ಲಾ ಮಾಡಿದರೆ ಅವರು ನಿಮ್ಮಜೊತೆ ಪದೇ ಪದೇ ಶೃಂಗಾರ ಕ್ರೀಯೆಯಲ್ಲಿ ತೊಡಗುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ