ಮದುವೆಗೆ ಮೊದಲೇ ನನಗೆ ಕಾಡುತ್ತಿದೆ ಈ ಭಯ!

ಗುರುವಾರ, 18 ಜುಲೈ 2019 (09:35 IST)
ಬೆಂಗಳೂರು: ಆಧುನಿಕ ಕಾಲದಲ್ಲಿ ಮಹಿಳೆಯರು ಮದುವೆಯಾದ ತಕ್ಷಣ ಗರ್ಭಿಣಿಯಾಗಲು ಇಷ್ಟಪಡುವುದಿಲ್ಲ. ಹೀಗಿರುವಾಗ ಯಾವ ಗರ್ಭನಿರೋಧಕ ಸೂಕ್ತ ಎನ್ನುವ ಗೊಂದಲದಲ್ಲಿರುತ್ತಾರೆ.


ಗುಳಿಗೆ ಸೇವನೆಯಿಂದ ಅಡ್ಡಪರಿಣಾಮಗಳಾಗುವ ಕಾರಣ ಇದರ ಬದಲು ಕಾಪರ್ ಟಿ ಹಾಕಿಸಿಕೊಳ್ಳಬಹುದೇ ಎಂದು ಕೆಲವರಿಗೆ ಅನುಮಾನಗಳಿವೆ. ಸಾಮಾನ್ಯವಾಗಿ ಈ ಗರ್ಭನಿರೋಧಕ ಬಳಸುವುದು ಒಂದು ಹೆರಿಗೆಯಾದ ಮೇಲೆ. ಅದರ ಬದಲು ನುರಿತ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಯಾವುದು ಸೂಕ್ತ ಎಂದು ಸಮಾಲೋಚನೆ ನಡೆಸುವುದು ಒಳಿತು. ಆದರೆ ಯಾವುದೇ ಜಾಹೀರಾತು ಓದಿ ಇಲ್ಲ ಸಲ್ಲದ ತಂತ್ರ ಮಾಡಲು ಹೋಗಬೇಡಿ. ಇದರಿಂದ ಮುಂದೆ ನಿಮಗೆ ಮಕ್ಕಳಾಗಲು ತೊಂದರೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ